Tuesday, August 16, 2022

Latest Posts

ಕನ್ಹಯ್ಯಲಾಲ್​ ಹತ್ಯೆ ಪ್ರಕರಣ: ಹೊರಬಿತ್ತು ಇನ್ನಷ್ಟು ಸ್ಫೋಟಕ ಮಾಹಿತಿಗಳು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ನೂಪುರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದ ರಾಜಸ್ಥಾನದ ಉದಯಪುರದ ಟೈಲರ್​ ನ ಶಿರಚ್ಛೇದ ಮಾಡಿದ ಇಸ್ಲಾಂ ಉಗ್ರರಿಗೂ, 26/11 ಮುಂಬೈ ಭಯೋತ್ಪಾದಕ ದಾಳಿಗೂ ಸಂಬಂಧ ಇದೆ ಎಂಬ ಬಗ್ಗೆ ಆಘಾತಕಾರಿ ವಿವರಗಳು ಬಹಿರಂಗವಾಗಿವೆ.

ಈಗಾಗಲೇ ಈ ಪಾಪಿಗಳಿಗೆ ಪಾಕಿಸ್ತಾನ ಹಾಗೂ ಐಸಿಸ್​ ಲಿಂಕ್​ ಇರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಬೆನ್ನಲ್ಲೇ ಮತ್ತಷ್ಟು ಭಯಾನಕ ಕೃತ್ಯಗಳು ಹೊರಕ್ಕೆ ಬರುತ್ತಿವೆ.
ಟೈಲರ್​ ಕನ್ಹಯ್ಯಲಾಲ್​ ಅವರ ಕೊಲೆ ಮಾಡಿ, ಅದರ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟು ಎಸ್ಕೇಪ್​ ಆಗುವಾಗ ಸಿಕ್ಕಿಬಿದ್ದಿರುವ ಪಾತಕಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿಯ ಜಾಡು ಹಿಡಿದು ಹೋಗಿರುವ ಪೊಲೀಸರಿಗೆ ಅವರು ಬಳಸಿರುವ ಬೈಕ್​ ನಿಮ್ದ ಸ್ಪೋಟಕ ಮಾಹಿತಿ ಸಿಕ್ಕಿದೆ.

ಕನ್ಹಯ್ಯಾ ಲಾಲ್‌ನನ್ನು ಕೊಂದ ಬಳಿಕ ಹಂತಕ ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಮೊಹಮ್ಮದ್ ಗೌಸ್ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಹಂತಕರು 2611 ನಂಬರ್‌ ಪ್ಲೇಟ್‌ ಹೊಂದಿರುವ ಬೈಕ್‌ ಅನ್ನೇ ಬಳಸಿರೋದು ಪತ್ತೆಯಾಗಿದೆ.

. 26/11 ಎಂದರೆ ಅದು ಮುಂಬೈ ತಾಜ್ ಹೋಟೆಲ್ ಮೇಲೆ 2013ರಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿ. ಇಡೀ ದೇಶವೇ ಬೆಚ್ಚಿಬಿದ್ದಿದ್ದ ಈ ದಾಳಿಗೂ ಈ ಬೈಕ್​ ಸಂಖ್ಯೆಗೂ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. 175 ಮಂದಿಯನ್ನು ಬಲಿ ಪಡೆದಿದ್ದ ಈ ದಾಳಿಗೂ, ಟೈಲರ್​ ಹತ್ಯೆ ಆರೋಪಿಗಳಿಗೂ ಸಂಬಂಧ ಇದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

RJ 27 AS 2611 ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್​ಅನ್ನು ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಮುಂಬೈ ದಾಳಿಯ ದಿನಾಂಕದ ನಂಬರ್ ಪ್ಲೇಟ್​ಗೂ ಉದಯಪುರದ ಕೊಲೆ ಆರೋಪಿಗಳಿಗೂ ಲಿಂಕ್ ಇರುವ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss