ಅಯ್ಯರ್- ಕಿಶನ್​ ಅಬ್ಬರದ ಬ್ಯಾಟಿಂಗ್: ಟೀಮ್ ಇಂಡಿಯಾಗೆ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೇಯಸ್​ ಅಯ್ಯರ್ ಅಜೇಯ ಶತಕ(113)​ ಹಾಗೂ ಇಶಾನ್​ ಕಿಶನ್​ ಅವರ ಅಬ್ಬರದ 93 ರನ್​ಗಳ ನೆರವಿನಿಂದ ಭಾರತ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಸೋಲುಣಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್​ ನಡೆಸಿತು. ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 279 ಪೇರಿಸಿತ್ತು.

279 ರನ್​ಗಳ ಗುರಿಯನ್ನು ಟೀಂ ಇಂಡಿಯಾ 48 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿತ್ತು. ಆರಂಭಿಕರಾದ ನಾಯಕ ಶಿಖರ್​ ಧವನ್ 13​ ಹಾಗೂ ಶುಭ್ಮನ್​ ಗಿಲ್​ 28 ರನ್​ ಗಳಿಸಿ ಪೆವಿಲಿಯನ್​ ಸೇರಿಕೊಂಡಿದ್ದರು.
ಆಗ ಒಂದಾದ ಶ್ರೇಯಸ್​ ಅಯ್ಯರ್ ಹಾಗೂ ಇಶಾನ್​ ಕಿಶನ್​ ಜೋಡಿ ಮೂರನೇ ವಿಕೆಟ್​ಗೆ 161 ರನ್​ ಜೊತೆಯಾಟವಾಡಿದರು. 84 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್​ ನೆರವಿನಿಂದ 93 ರನ್​ ಬಾರಿಸಿದ ಕಿಶನ್​ 7 ರನ್​ ಅಂತರದಲ್ಲಿ ಶತಕ ವಂಚಿತರಾದರು.
ಇನ್ನೊಂದೆಡೆ ಅಜೇಯ ಆಟವಾಡಿದ ಶ್ರೇಯಸ್​ ಅಯ್ಯರ್(113) ಬೌಂಡರಿಯೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಂಜು ಸ್ಯಾಮ್ಸನ್​ 30 ರನ್​ ಬಾರಿಸಿ ಅಜೇಯರಾಗುಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!