Wednesday, December 6, 2023

Latest Posts

ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರನ್ನು ಭೇಟಿಯಾದ ನಟಿ ರಾಗಿಣಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್ ನಟಿ ರಾಗಿಣಿ ಇತ್ತೀಚೆಗೆ ಶೂಟಿಂಗ್ ವೇಳೆ ಎಡಗೈಗೆ ಪೆಟ್ಟು ಮಾಡಿಕೊಂಡು ಸುದ್ದಿಯಲ್ಲಿದ್ದರು. ಇದೀಗ ನಟಿ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರನ್ನು ಭೇಟಿಯಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಏರು ಬೀಳು ಅನುಭವಿಸಿದ ರಾಗಿಣಿ ಕಮಾಂಡೋ ಚಿತ್ರೀಕರಣ ಮೂಲಕ ಮತ್ತೆ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ.
ಇದರ ನಡುವೆ ನಟಿ ಮುಂಬೈನತ್ತ ಮುಖ ಮಾಡಿದ್ದು, ಕಪಿಲ್ ಅವರನ್ನ ಭೇಟಿಯಾಗಿದ್ದಾರೆ.

ಕ್ರಿಕೆಟ್ ಲೋಕದ ಮಹಾನ್ ದಿಗ್ಗಜ ಕಪಿಲ್ ದೇವ್ ಅವರನ್ನ ಮುಂಬೈನಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಅವರ ಜೊತೆಗೆ ಸಾಕಷ್ಟು ಸಮಯ ಮಾತನಾಡಿದ್ದಾರೆ. ಎಲ್ಲ ಫ್ಯಾನ್ಸ್ ರೀತಿಯಲ್ಲಿಯೇ ಕಪಿಲ್ ದೇವ್ ಜೊತೆ ರಾಗಿಣಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಫೋಟೋ ತೆಗೆಸಿಕೊಂಡಿದ್ದಕ್ಕೆ ರಾಗಿಣಿ ಸಂಭ್ರಮದಿಂದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!