ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧಿಸಿ ಶಾಸಕ ಮುಕೇಶ್ ಪಡೆದಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ವಿಶೇಷ ತನಿಖಾ ತಂಡ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಮುಂದಾಗಿದೆ.
ನಟಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಸೆಷನ್ಸ್ ಕೋರ್ಟ್ ಮುಖೇಶ್ ಮತ್ತು ನಟ ಇಡವೇಳ ಬಾಬು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜೊತೆಗೆ ತನಿಖೆ ಪೂರ್ಣಗೊಳ್ಳುವ ತನಕ ಕೇರಳ ಬಿಟ್ಟು ಹೋಗಬಾರದು, ತನಿಖೆಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿತ್ತು.
ಇದನ್ನು ರದ್ದುಗೊಳಿಸುವಂತೆ ತನಿಖಾ ತಂಡ ಸರ್ಕಾರಿ ವಕೀಲರ ಕಾನೂನು ಸಲಹೆ ಪಡೆದು ಮೇಲ್ಮನವಿ ಸಲ್ಲಿಸಲಿದೆ. ನಿರೀಕ್ಷಣಾ ಜಾಮೀನಿಂದ ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂಬುದು ತನಿಖಾ ತಂಡದ ವಾದವಾಗಿದೆ. ಆದರೆ ಇದನ್ನು ಅಲ್ಲಗಳೆದಿರುವ ಮುಕೇಶ್, ನಟಿ ಸುಳ್ಳು ದೂರು ನೀಡಿದ್ದಾರೆ. ಆಕೆ ತನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದಾಳೆ ಎಂದು ಹೇಳಿದ್ದಾರೆ.