ಅಬ್ಬಬ್ಬಾ.. ಪುಷ್ಪಾ-2 ಗೆ ರಶ್ಮಿಕಾ ಸಂಭಾವನೆ ಇಷ್ಟೊಂದಾ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ತೆಲುಗು, ತಮಿಳು, ಬಾಲಿವುಡ್‌ ಸೇರಿದಂತೆ ಭಾರತೀಯ ಸಿನಿರಂಗದಲ್ಲಿ ರಶ್ಮಿಕಾ ಮಂದಣ್ಣ ಹೆಸರು ಸದ್ದು ಮಾಡುತ್ತಿದೆ. ಪುಷ್ಪಾ ಬಿಗ್‌ ಹಿಟ್‌ ಆದ ಬಳಿಕ ರಶ್ಮಿಕಾ ಮಂದಣ್ಣಗೆ ಸಕತ್‌ ಬೇಡಿಕೆ ಸೃಷ್ಟಿಯಾಗಿದೆ. ಸುಕುಮಾರ್ ನಿರ್ದೇಶನದ ಪುಷ್ಪಾ ಎರಡನೇ ಭಾಗಕ್ಕಾಗಿ ರಶ್ಮಿಕಾ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ವಿಚಾರ ಇದೀಗ ಹೊರಬಿದ್ದಿದೆ.
ವರದಿಯ ಪ್ರಕಾರ ರಶ್ಲಿಕಾ ಮೊದಲ ಪಾರ್ಟ್‌ ಗೆ 2 ಕೋಟಿ ಸಂಭಾವನೆ ಪಡೆದಿದರು. ಇದೀಗ ಚಿತ್ರೀಕರಣ ಹಂತದಲ್ಲಿರುವ ʼಪುಷ್ಪಾ -ದಿ ರೂಲ್‌ʼಗೆ ರಶ್ಮಿಕಾ 3 ಕೋಟಿ ಬೇಡಿಕೆಯಿಟ್ಟಿದ್ದು, ನಿರ್ಮಾಪಕರೂ ಸಹ ದೊಡ್ಡ ಮೊತ್ತವನ್ನು ನೀಡಲು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರೊಂದಿಗೆ, ರಶ್ಮಿಕಾ ಮಂದಣ್ಣ ಸಮಂತಾ ರುತ್ ಪ್ರಭುರನ್ನು ಹಿಂದೆ ಹಾಕಿ ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪೂಜಾ ಹೆಗಡೆ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ವರದಿಯಾಗಿದೆ. ಪೂಜಾ ಹೆಗಡೆ ಪ್ರತಿ ಚಿತ್ರಕ್ಕೆ 3.5 ಕೋಟಿ ಪಡೆಯುತ್ತಿದ್ದರೆ, ರಶ್ಮಿಕಾ ಮಂದಣ್ಣ 3 ಕೋಟಿ ಪಡೆಯಲಿದ್ದಾರೆ. ಇನ್ನು ಸಮಂತಾ ರುತ್ ಪ್ರಭು ಪ್ರತಿ ಚಿತ್ರಕ್ಕೆ 2 ಕೋಟಿ ಗಳಿಸುತ್ತಾರೆ. ಕೀರ್ತಿ ಸುರೇಶ್ ಹಾಗೂ ಅನುಷ್ಕಾ ಶೆಟ್ಟಿ ಸಹ 2 ಕೋಟಿ
ಸಂಭಾವನೆ ಪಡೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!