ಜನ್ಮದಿನೋತ್ಸವ ನೋಡಿ ಜನರು ಮತ ಹಾಕುವದಿಲ್ಲ: ಸಚಿವ ಸಿ.ಸಿ.ಪಾಟೀಲ

ಹೊಸದಿಗಂತ ವರದಿ ಗದಗ :
ಯಾವ ಸಂಘಟನೆಗಳಿಗೂ, ಯಾರ ಜನ್ಮದಿನೋತ್ಸವಕ್ಕೂ ಬಿಜೆಪಿಯು ಹೆದರುವದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಗುಡುಗಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ನೂರು ವರ್ಷ ಬಾಳಲಿ ಎಂದು ನಾವು ಹಾರೈಸುತ್ತೆವೆ. ಆದರೆ, ಅವರು ರಾಷ್ಟ್ರಧ್ವಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಅವರಿಗೆ ಶೋಭೆ ತರುವಂತದಲ್ಲ ರಾಷ್ಟ್ರಧ್ವಜವು ಬಿಜೆಪಿಯ ಸ್ವತ್ತಲ್ಲ, ಸಿದ್ದರಾಮೋತ್ಸವದ ಮುಂಚೆಯೆ ನಾವು ಜನೋತ್ಸವ ಕಾರ್ಯಕ್ರಮವನ್ನು ನಿಗದಿ ಪಡೆಸಿದ್ದೆವು. ಆದರೆ, ಮಂಗಳೂರಿನಲ್ಲಿ ಕಾರ್ಯಕರ್ತನ ಹತ್ಯೆಯಿಂದಾಗಿ ಸಂಭ್ರಮಾಚರಣೆ ಮಾಡಲಾಗಲಿಲ್ಲ, ನಮ್ಮ ಪಕ್ಷದಲ್ಲಿ ದಿನವು ಸಂಭ್ರಮಾಚರಣೆ ಇರುತ್ತದೆ ಎಂದರು.

ಜನ್ಮದಿನೋತ್ಸವ ನೋಡಿ ಜನರು ಮತ ಹಾಕುವದಿಲ್ಲ, ಯಾವ ಸರಕಾರ ಉತ್ತಮವಾಗಿ ಆಡಳಿತ ನೀಡಿದೆ, ಊರಿನಲ್ಲಿ ಅಭಿವೃದ್ದಿ ಕಾರ್ಯಗಳು ಎಷ್ಟಾಗಿವೆ?, ಯಾವ ವರ್ಗಕ್ಕೆ ಏನು ಕೊಡುಗೆ ನೀಡಿದ್ದಾರೆ, ಹಿಂದುಳಿದ ವರ್ಗಕ್ಕೆ ಏನೆಲ್ಲಾ ಅನುಕೂಲವಾಗಿದೆ, ದುಡಿಯುವ ಕೈಗಳಿಗೆ ಎಷ್ಟು ಕೆಲಸ ದೊರಕಿದೆ? ಇವುಗಳನ್ನು ನೋಡಿ ಜನರು ಮತ ಹಾಕುತ್ತಾರೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಪಕ್ಷದ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಸಂದರ್ಭದಲ್ಲಿ ಮಾಹಿತಿಯನ್ನು ಬಿಡುಗಡೆಗೊಳಿಸುತ್ತಾರೆ ಎಂದು ಅವರು ಹೇಳಿದರು.

ಕಳೆದ 2 ತಿಂಗಳಿಂದ ಅತ್ಯಂತ ಭೀಕರವಾದ ಮಳೆಯನ್ನು ನಾವುಗಳು ಕಂಡಿದ್ದೆವೆ. ಉಡುಪಿ, ಮಂಗಳೂರು, ಮೈಸೂರ ಪ್ರವಾಸ ಮಾಡಿದಾಗ ಅಲ್ಲಿ ಆಗಿರುವ ಹಾನಿಯನ್ನು ಕಣ್ಣಾರೆ ಕಂಡಿದ್ದೆನೆ. ಈ ಭಾಗದಲ್ಲಿಯೂ ಸಹ ಸಾಕಷ್ಟು ಹಾನಿಯಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು 200 ಕೋ.ರೂ.ಗಳ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಜಿಲ್ಲೆಗೆ 5 ಕೋಟಿ ಪರಿಹಾರ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಯಾವ ಬೆಳೆಯು ನಿಖರವಾಗಿ ಹಾನಿಯಾಗಿದೆ ಎಂಬುವದನ್ನು ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆನೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!