September 8, 2026
Tuesday, September 8, 2026
spot_img

ಸಿಕ್ಕಾಪಟ್ಟೆ ತೂಕ ಜಾಸ್ತಿಯಾಗಿದ್ದೀನಿ ಆದರೂ ಒಂಥರಾ ಖುಷಿಯಿದೆ ಎಂದ ನಟಿ ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತೀ ಹೆಣ್ಣುಮಕ್ಕಳ ಜೀವನದಲ್ಲಿಯೂ ತಾಯ್ತನ ಅನ್ನೋದು ತುಂಬಾನೇ ಸ್ಪೆಷಲ್‌. ತಾನು ದಪ್ಪ ಆಗ್ತೀನಿ, ವರ್ಷಗಟ್ಟಲೆ ನೋಡಿಕೊಂಡು ಬಂದ ದೇಹ ಸಾಕಷ್ಟು ರೀತಿಯಲ್ಲಿ ಬದಲಾಗುತ್ತದೆ ಎಂದು ಗೊತ್ತಿದ್ದರೂ ಮಹಿಳೆ ತಾಯಿಯಾಗೋದನ್ನೇ ಆರಿಸಿಕೊಳ್ತಾರೆ. ಇದೇ ಸ್ಟೇಜ್‌ನಲ್ಲಿ ನಟಿ ಸಮಂತಾ ಕೂಡ ಇದ್ದಾರೆ. ಪ್ರೆಗ್ನೆನ್ಸಿಯ ಜರ್ನಿ ಇನ್ನೂ ಬಾಕಿಯಿದೆ. ಹೀಗಿರುವಾಗಲೇ ನಾನು ಹನ್ನೊಂದು ಕೆಜಿ ತೂಕ ಹೆಚ್ಚಾಗಿದ್ದೇನೆ. ಆದರೆ ಸ್ವಲ್ಪವೂ ಬೇಜಾರಿಲ್ಲ ಇದು ಖುಷಿಯ ಭಾರ ಎಂದು ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟಿಯರು ತಮ್ಮ ಫ್ರೀ ಸಮಯವನ್ನು ಪಶ್ನೋತ್ತರದ ಮೂಲಕ ಕಳೆಯುತ್ತಾರೆ. ಸಮಂತಾ ಕೂಡ ಏನಾದ್ರೂ ಪ್ರಶ್ನೆಗಳನ್ನು ಕೇಳಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಅಂತೆಯೇ ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ತಿಂದು ತಿಂದು ತೂಕ ಹೆಚ್ಚಿಸಿಕೊಂಡಿದ್ದೀರಾ ಇಲ್ವಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಮಂತಾ ಉತ್ತರ ನೀಡಿದ್ದು, ನಾನು ಈಗಾಗಲೇ ಹನ್ನೊಂದು ಕೆಜಿ ತೂಕ ಜಾಸ್ತಿ ಆಗಿದ್ದೀನಿ. ಆದರೆ ಬೇಜಾರು ಅನಿಸ್ತಾ ಇಲ್ಲ ಎಂದಿದ್ದಾರೆ.

ಇನ್ನು ಮಗುವನ್ನು ಫೀಡ್‌ ಮಾಡಿಸೋದು, ಬರ್ಪ್‌ ಮಾಡಿಸೋದು, ಕ್ಲೀನ್‌ ಮಾಡೋದು, ಮಲಗಿಸೋದು ಇಷ್ಟೇ ನಿಮ್ಮ ಜೀವನ ಆಗಲಿದೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಅದಕ್ಕೆ ಸಮಂತಾ ಇದು ಫುಲ್‌ ಟೈಮ್‌ ಕೆಲಸದಂತೆಯೇ ಅನಿಸ್ತಾ ಇದೆ. ನಾನು ಸಂಪೂರ್ಣ ರೆಡಿ ಇದ್ದೇನೆ ಎಂದಿದ್ದಾರೆ. ಈ ಫೇಸ್‌ನ್ನು ಎಂಜಾಯ್‌ ಮಾಡ್ತಿದ್ದೀರಾ ಅಥವಾ ಕಷ್ಟವಾಗ್ತಿದೆಯಾ ಎಂದು ಕೇಳಿದ್ದಾರೆ. ಅದಕ್ಕೆ ಸಮಂತಾ ಖಂಡಿತಾ ಹೃದಯಪೂರ್ವಕವಾಗಿ ಎಲ್ಲವನ್ನೂ ಎಂಜಾಯ್‌ ಮಾಡ್ತಿದ್ದೇನೆ ಎಂದಿದ್ದಾರೆ.


Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !