October 9, 2026
Friday, October 9, 2026
spot_img

CINE | ತಮಿಳು ಸಿನಿಮಾ ನಿರ್ಮಾಪಕನ ಜೊತೆ ಹಸೆಮಣೆ ಏರಲಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆ ತಮಿಳು ಸಿನಿಮಾ ನಿರ್ಮಾಪಕ ಸುಧನ್‌ ಸುಂದರಮ್‌ ಅವರ ಜೊತೆ ಹಸೆಮಣೆ ಏರಲಿದ್ದಾರೆ.

ಕನ್ನಡದ ನಟಿ ತಮಿಳುನಾಡಿನ ಸೊಸೆಯಾಗಿ ಹೋಗಲಿದ್ದು, ಫೇಮಸ್‌ ಸಿನಿಮಾಗಳಾದ ಮಹಾರಾಜ, ತಾಕ್‌ ಕಿಳವಿ ಸಿನಿಮಾಗೆ ದುಡ್ಡು ಹಾಕಿದ್ದಾರೆ. ಇದೇ ತಿಂಗಳ 25ರಂದು ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಇದೇ ವರ್ಷ ಮದುವೆಯಾಗಲಿದ್ದಾರೆ.

ಸುಧನ್ ಅವರು ಪ್ಯಾಷನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು, ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಮಹಾರಾಜ’ ಮಾತ್ರವಲ್ಲದೆ, ತಮಿಳಿನ ‘ಬೆಂಜ್’, ‘ಇರೈವನ್’, ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ನಟಿ ಶರ್ಮಿಳಾ ಮಾಂಡ್ರೆ ಅವರನ್ನು ವಿವಾಹವಾಗುತ್ತಿದ್ದಾರೆ.

ಶರ್ಮಿಳಾ ಮಾಂಡ್ರೆ ಕೂಡ ತಮಿಳಿನ ನಾಲ್ಕು ಸಿನಿಮಾಗಳನ್ನು ನಿರ್ಮಿಸಿದ್ದಾರೆ ಜೊತೆಗೆ ಕನ್ನಡದ ದಸರಾ ಸಿನಿಮಾಗೂ ಹಣ ಹಾಕಿದ್ದಾರೆ.

Must Read