ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೊಟೀಸ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆ ಹಾಗೂ ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಎಂದು ನಟಿ ಶ್ರುತಿ (Shruti) ನೀಡಿದ ಹೇಳಿಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ಅವರಿಗೆ ನೊಟೀಸ್ ಜಾರಿ ಮಾಡಿದೆ.

ಶ್ರುತಿಗೆ ಕೊಟ್ಟಿ ನೋಟಿಸ್ (Notice) ನಲ್ಲಿ ಈ ರೀತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿರೋದು ಖಂಡನೀಯ. ರಾಜ್ಯ ಮಹಿಳಾ ಆಯೋಗದ (Commission for Women) ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ನೋಟಿಸ್ ಜಾರಿ ಮಾಡಿದೆ. ಏಳು‌ ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರ್ ನಲ್ಲಿ ನಡೆದ ಚುನಾವಣಾ ಭಾಷಣದ ಅಬ್ಬರದಲ್ಲಿ ಮಹಿಳೆಯರನ್ನು ಶ್ರುತಿ ಟೀಕಿಸಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದ್ದು, ನಂತರ ಮಹಿಳಾ ಆಯೋಗ ನೊಟೀಸ್ ನೀಡಿ, ಸ್ಪಷ್ಟೀಕರಣ ಕೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!