ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್, ಬಾಲಿವುಡ್ ನಲ್ಲಿ ಸ್ಯಾಂಡಲ್ ವುಡ್ ನಟಿಯರ ಹವಾ ಹೆಚ್ಚಾಗಿದ್ದು, ಈಗ ನಟ ಮಹೇಶ್ ಬಾಬು ಚಿತ್ರಕ್ಕೆ ಕ್ಯೂಟ್ ನಟಿ ಶ್ರೀಲೀಲಾ ನಾಯಕಿ ಆಗಲಿದ್ದಾರಂತೆ.
ಈ ಚಿತ್ರಕ್ಕೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಲಿದ್ದು, 12 ವರ್ಷಗಳ ನಂತರ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ನ ಚಿತ್ರ ತೆರೆ ಕಾಣಲಿದೆ.
ಈ ಚಿತ್ರಕ್ಕೆ ನಟಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಎರಡನೇ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ಆದರೂ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಹಿರಂಗಗೊಳಿಸಿಲ್ಲ.
ಶ್ರೀಲೀಲಾ ಕನ್ನಡದಲ್ಲಿ ಕಿಸ್ ಸಿನಿಮಾದ ಮೂಲಕ ಮನೆಮಾತಾಗಿರುವ ಬೆಡಗಿ, ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗಿನಲ್ಲೂ ಜನಪ್ರಿಯ ನಟಿಯಾಗಿ ಮಿಂಚುತ್ತಿದ್ದಾರೆ.
ಹೀಗೆ ಪರಭಾಷೆಗಳಲ್ಲಿ ಶ್ರೀಲೀಲಾಗೆ ಹೆಚ್ಚಿನ ಅವಕಾಶ ಸಿಕ್ಕರೆ ಅವರು ಟಾಪ್ ಹೀರೋಯಿನ್ ಆಗೋದ್ರಲ್ಲಿ ಡೌಟ್ ಇಲ್ಲ ಅಂತಿದ್ದಾರೆ ನೆಟ್ಟಿಗರು.