October 9, 2026
Friday, October 9, 2026
spot_img

ಗಾಸಿಪ್‌ಗಳಿಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ತ್ರಿಷಾ: ಸ್ವಾತಂತ್ರ್ಯ ದಿನದ ಪರೇಡ್‌ನಲ್ಲಿ ವಿಜಯ್ ಅಪ್ಪ-ಅಮ್ಮನ ಪಕ್ಕದಲ್ಲೇ ಪ್ರತ್ಯಕ್ಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳು ಚಿತ್ರರಂಗದ ಸ್ಟಾರ್ ನಟಿ ತ್ರಿಷಾ ಮತ್ತು ತಮಿಳುನಾಡಿನ ಸಿಎಂ ವಿಜಯ್ ಸಂಬಂಧದ ಕುರಿತು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ವದಂತಿಗಳ ಬೆನ್ನಲ್ಲೇ, ನಟಿ ತ್ರಿಷಾ ಅವರು ಸ್ವಾತಂತ್ರ್ಯ ದಿನದ ಪರೇಡ್ ಕಾರ್ಯಕ್ರಮದಲ್ಲಿ ವಿಜಯ್ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡು ಗಾಸಿಪ್ ಪ್ರಿಯರಿಗೆ ಭರ್ಜರಿ ಟ್ವಿಸ್ಟ್ ನೀಡಿದ್ದಾರೆ.

ವಿಜಯ್ ಅಪ್ಪ-ಅಮ್ಮನ ಪಕ್ಕದಲ್ಲೇ ತ್ರಿಷಾ ಆಸನ:

ಚೆನ್ನೈನಲ್ಲಿ ನಡೆದ ಭವ್ಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ನಟಿ ತ್ರಿಷಾ ಅವರು ಸಿಎಂ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಅವರ ಪಕ್ಕದಲ್ಲೇ ಆಸನ ಅಲಂಕರಿಸಿ ಕುಳಿತಿದ್ದರು. ವಿಜಯ್ ಪೋಷಕರ ಜೊತೆ ಅತ್ಯಂತ ಆಪ್ತವಾಗಿ ಮಾತನಾಡುತ್ತಾ ಕಾಲ ಕಳೆದ ತ್ರಿಷಾ ಅವರ ಈ ವಿಡಿಯೋಗಳು ಮತ್ತು ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿವೆ.

ವಿಜಯ್ ಕಡೆಯಿಂದ ಸಲ್ಯೂಟ್, ಎದ್ದು ನಿಂತು ಗೌರವಿಸಿದ ತ್ರಿಷಾ:

ಪರೇಡ್ ವೇಳೆ ಮುಖ್ಯಮಂತ್ರಿ ವಿಜಯ್ ಅವರು ಸಾರ್ವಜನಿಕರ ಗ್ಯಾಲರಿಯಲ್ಲಿ ಆಸನ ಅಲಂಕರಿಸಿದ್ದ ತಮ್ಮ ತಂದೆ-ತಾಯಿ ಮತ್ತು ನಟಿ ತ್ರಿಷಾ ಅವರನ್ನು ಗುರುತಿಸಿ ಸಲ್ಯೂಟ್ ಹೊಡೆದರು. ತಕ್ಷಣವೇ ಅವರೆಲ್ಲರೂ ತಮ್ಮ ಆಸನದಿಂದ ಎದ್ದು ನಿಂತು, ಮುಖದಲ್ಲಿ ದೊಡ್ಡ ಮುಗುಳ್ನಗೆಯೊಂದಿಗೆ ವಿಜಯ್ ಅವರ ಸಲ್ಯೂಟ್‌ಗೆ ಮರಳಿ ಗೌರವ ಸಲ್ಲಿಸಿದರು.

ಇದನ್ನೂ ಓದಿ:

ಇತ್ತೀಚೆಗಷ್ಟೇ ವಿಜಯ್ ಅವರ ಪತ್ನಿ ಸಂಗೀತಾ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಈಗ ತ್ರಿಷಾ ಅವರು ನೇರವಾಗಿ ವಿಜಯ್ ಅವರ ಹೆತ್ತವರ ಜೊತೆಯೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Must Read