Thursday, March 23, 2023

Latest Posts

ಅಬ್ಬಬ್ಬಾ…1,999 ಪುಟಗಳ ಪ್ರೇಮ ಪತ್ರ: 23 ವರ್ಷಗಳ ಹಿಂದೆ ಪತ್ನಿಗೆ ಕಳಿಸಿದ ಸಂದೇಶ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಗ ತಂತ್ರಜ್ಞಾನ ಬಂದಿದ್ದು, ಲಭ್ಯವಿರುವ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಪ್ರೀತಿಯನ್ನು ಚಿತ್ರ, ವಿಚಿತ್ರವಾಗಿ ವ್ಯಕ್ತಪಡಿಸುತ್ತಾರೆ. ಆದರೆ ಒಂದು ಕಾಲದಲ್ಲಿ ‘ಪ್ರೇಮ ಪತ್ರ’ ಪ್ರೀತಿಯನ್ನು ವ್ಯಕ್ತಪಡಿಸುವ ಸಾಧನ. ಈ ‘ಪ್ರೇಮಪತ್ರ’ ಸದಾ ನೆನಪಿನಲ್ಲಿ ಉಳಿಯುವಂಥದ್ದು, ಮನಸ್ಸಿಗೆ ಮುಟ್ಟುವಂಥದ್ದು. ಅವರ ಮನದಾಳದ ಮಾತು ಪ್ರೀತಿಯ ಅಕ್ಷರಗಳಾಗಿ ರೂಪುಗೊಂಡ ಸಿಹಿ ಸಂಕೇತ. ಇಂತಹ ಅದ್ಧೂರಿ ‘ಪ್ರೇಮ ಪತ್ರ’ ಅದು 23 ವರ್ಷಗಳ ಹಿಂದೆ ಪತಿಯೊಬ್ಬ ಪತ್ನಿಗೆ ಬರೆದದ್ದು, ಇದೀಗ ವೈರಲ್ ಆಗಿದೆ.

ಉತ್ತರಾಖಂಡದ ಅಲ್ಮೋಡಾ ಜಿಲ್ಲೆಯ ಚಪಾಡ್ ಗ್ರಾಮದಿಂದ 23 ವರ್ಷಗಳ ಹಿಂದೆ ಜೀವನ್ ಸಿಂಗ್ ತನ್ನ ಪತ್ನಿಗೆ ಬರೆದ ಪತ್ರದ ಕಥೆಯಿದು. ಈತ ತನ್ನ ಪತ್ನಿಗೆ ಬರೆದ ಪ್ರೇಮ ಪತ್ರ ಬರೋಬ್ಬರಿ 1,999 ಪುಟಗಳನ್ನೊಳಗೊಂಡಿತ್ತು.  ಈ ಬೃಹತ್ ‘ಪ್ರೇಮ ಪತ್ರ’ ಬರೆಯಲು ಜೀವನ್ ಸಿಂಗ್ ಮೂರು ತಿಂಗಳು ತೆಗೆದುಕೊಂಡಿದ್ದು, ಭಾವನೆಗಳನ್ನು ಕಪ್ಪು ಶಾಹಿಯಲ್ಲಿ ಮಚ್ಚೆಯಿಲ್ಲದೆ ಹಾಳೆಯ ಮೇಲೆ ರೂಪಿಸಲು 111 ಪೆನ್ನುಗಳು ಶ್ರಮಿಸಿವೆ. ಈ ಪ್ರೇಮಿಯ ಪ್ರೀತಿಯನ್ನು ವ್ಯಕ್ತಪಡಿಸುವ ಈ ಅಪೂರ್ವ ಪತ್ರ 8 ಕೆಜಿ ತೂಗಿದ್ದು, ಜೀವನ್ ಸಿಂಗ್ ತನ್ನ ಪ್ರೀತಿಯನ್ನು 10 ಲಕ್ಷಕ್ಕೂ ಹೆಚ್ಚು ಪದಗಳಿಂದ ಪತ್ನಿ ಕಮಲ್ ಗೆ ಬರೆದಿದ್ದಾರೆ.

ಕಮಲಾ ಬೇರೆ ಊರಿನವರೇನಲ್ಲ ಅದೇ ಊರಿನವರು. ಮೊದಲ ನೋಟದಲ್ಲೇ (Love at first sight) ಪ್ರೀತಿಯಾಗಿ ಅದು ದಂಪತಿ ಸಂಬಂಧಕ್ಕೆ ತಿರುಗಿದೆ. ಮದುವೆಯ ನಂತರ ಜೀವನ್ ಕೆಲಸದಿಂದಾಗಿ ಗಂಡ ಹೆಂಡತಿ ಬೇರೆಯಾಗಬೇಕಾಯಿತು. ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಈ ‘ಪ್ರೇಮಪತ್ರ’ ಬರೆದಿದ್ದಾನೆ ಆಗಲೇ ಈ ಪತ್ರಕ್ಕೆ 700ರೂ ಖರ್ಚು ಮಾಡಿದ್ದರಂತೆ.

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಕೆಲಸಕ್ಕೆ ತೆರಳಿದ ಜೀವನ್‌ ಸಂಜೆ ಮನೆಗೆ ಬಂದ ನಂತರ ಕೆಲಸ ಮುಗಿಸಿ ಶಾಂತವಾಗಿ ಕುಳಿತು ಪತ್ನಿ ಕಮಲಾಳನ್ನು ನೆನೆದು ಪತ್ರ ಬರೆಯುತ್ತಿದ್ದರಂತೆ. ದೂರದಲ್ಲಿರುವ ಪತ್ನಿ ಕಮಲಾಳ ನೆನಪುಗಳನ್ನು ಯೋಚಿಸುತ್ತಾ ಪತ್ರ ಬರೆಯುವುದು ಅಭ್ಯಾಸವಾಗಿಬಿಟ್ಟಿದೆ ಅಂತಾರೆ ಜೀವನ್.‌ ಆಗ ದೂರವಾಣಿ ಸೌಲಭ್ಯಗಳು ಇಲ್ಲದ ಕಾರಣ ಜೀವನ್ ಸಿಂಗ್ 1,999 ಪುಟಗಳ ಪ್ರೇಮ ಪತ್ರ ಬರೆದು, ತಾನು ಹೇಳಬಯಸುವ ಮಾತುಗಳಿಗೆ, ವ್ಯಕ್ತಪಡಿಸಬೇಕಾದ ಭಾವನೆಗಳಿಗೆ ಪತ್ರದ ರೂಪ ನೀಡಿದ್ದರು.

ಕಮಲಾ ಆ ಪ್ರೇಮ ಪತ್ರವನ್ನು ಸ್ವೀಕರಿಸಿದ ಸಂತೋಷದಿಂದ ಆ ಪ್ರೇಮ ಪತ್ರ ಓದಿದ ಕಮಲಾಗೆ ಅರ್ಥವಾಗಿದ್ದು, ತನ್ನ ಪತಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಅಂತ. ಆ ಬೃಹತ್ ಪ್ರೇಮ ಪತ್ರ ಎರಡು ದಶಕಗಳ ನಂತರವೂ ಅವರ ಮನೆಯಲ್ಲಿ ಸಿಹಿ ನೆನಪಾಗಿ ಉಳಿಯಿತು. ಅದು ನಮ್ಮ ಅಮೂಲ್ಯ ಆಸ್ತಿ ಅಂತಾರೆ ಗಂಡ-ಹೆಂಡತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!