ಅಂಬಾನಿ ಜತೆಗೆ ಆಗದ್ದನ್ನು ಅದಾನಿ ಜತೆ ಸೇರಿ ಮಾಡಲಿದೆಯಾ ಸೌದಿಯ ಈ ಕಂಪನಿ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸೌದಿ ಅರೆಬಿಯಾದ ಅರಾಮ್ಕೊ ಜಗತ್ತಿನ ಅತಿದೊಡ್ಡ ತೈಲರಫ್ತುದಾರ ಕಂಪನಿ. ಕೆಲ ತಿಂಗಳುಗಳ ಹಿಂದೆ ಇದು ಭಾರತದ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಿದೆ ಎಂಬ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಆ ಮಾತುಕತೆ ಏಕೋ ಮುರಿದುಬಿದ್ದಿತ್ತು.

ಇದೀಗ ಬ್ಲೂಮಬರ್ಗ್ ಮಾಧ್ಯಮದಲ್ಲಿ ಬಂದಿರುವ ವರದಿಯ ಪ್ರಕಾರ ಅದಾನಿ ಗ್ರೂಪ್ ಈಗ ಸೌದಿ ಅರಾಮ್ಕೊದ ಕೆಲ ಪಾಲುಗಳನ್ನು ಖರೀದಿಸಲಿದೆ. ಇದು ನಿಜವಾಗಿದ್ದಲ್ಲಿ ಸೌದಿ ಅರಾಮ್ಕೊದ ಹೂಡಿಕೆ ಭಾರತಕ್ಕೆ ಹರಿದುಬರಲಿದೆ.

ಗೌತಮ್ ಅದಾನಿಯ ಅದಾನಿ ಎನರ್ಜಿ ಗುಂಪು ಬಂದರು, ನವೀಕೃತ ಇಂಧನ, ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಹೀಗೆ ಹಲವು ಆಯಾಮಗಳ ವ್ಯಾಪಾರಾಸಕ್ತಿಗಳನ್ನು ಹೊಂದಿದೆ. ಮುಖ್ಯವಾಗಿ ನವೀಕೃತ ಇಂಧನಮೂಲಗಳಲ್ಲಿ ಅದಾನಿ ಸಮೂಹ ತೊಡಗಿಸಿಕೊಂಡಿರುವುದು ಸೌದಿಯ ಕಂಪನಿಗೆ ಪ್ರಮುಖ ಆಕರ್ಷಣೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಸೌದಿಯ ಅರಾಮ್ಕೊ ದೀರ್ಘಾವಧಿಯಲ್ಲಿ ತೈಲಕ್ಕೆ ಹೊರತಾದ ಬದಲಿ ಇಂಧನಗಳಲ್ಲೂ ಹೂಡಿಕೆ ಮಾಡಿ ಭವಿಷ್ಯಕ್ಕೆ ಸಿದ್ಧವಾಗುವುದರತ್ತ ಯೋಚಿಸುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!