ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬುಲ್ಡೋಜರ್ ಬಾಬಾ ಎಂಬ ಹೆಸರು ಗಳಿಸಿದ್ದರು. ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬುಲ್ಡೋಜರ್‌ಗಳು ಬಿಜೆಪಿಯ ಚಿಹ್ನೆ ಕಮಲದಷ್ಟೇ ಪ್ರಸಿದ್ಧಿ ಪಡೆದಿದ್ದವು. ಈಗ ಪಕ್ಕದ ಮಧ್ಯಪ್ರದೇಶಕ್ಕೂ ಬುಲ್ಡೋಜರ್‌ಗಳ ಮೇಲಿನ ಪ್ರೀತಿ ಹಬ್ಬಿದಂತಿದೆ.
ಮಧ್ಯಪ್ರದೇಶದ ರೈಸನ್‌ನಲ್ಲಿ ನಡೆದ ಹಿಂಸಾಚಾರದ ನಂತರ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರಕಾರವು ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸರಕಾರದಿಂದ ಸೂಚನೆ ಬಂದ ನಂತರ ಸ್ಥಳೀಯ ಜಿಲ್ಲಾಡಳಿತ ಕ್ರಮ ಕೈಗೊಂಡು ಅಕ್ರಮ ಮನೆ, ಅಂಗಡಿಗಳನ್ನು ನೆಲಸಮಗೊಳಿಸಿದೆ.
अपराधियों के विरुद्ध मध्यप्रदेश सरकार का अभियान।
रायसेन के अपराधियों के घर जमींदोज! pic.twitter.com/VvNiIeDpDP
— Office of Shivraj (@OfficeofSSC) March 20, 2022
ಇಲ್ಲಿಯವರೆಗೆ, ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರಕಾರವು ಅಪರಾಧಿಗಳು ನಿರ್ಮಿಸಿದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ತ್ವರಿತ ಕ್ರಮಕ್ಕೆ ಹೆಸರುವಾಸಿಯಾಗಿದೆ. ಈಗ ಶಿವರಾಜ್ ಸಿಂಗ್ ಚೌಹಾಣ್ ಅವರ ‘ಬುಲ್ಡೋಜರ್ ಮಾಮ’ ಆವೃತ್ತಿಯನ್ನು ಅನಾವರಣಗೊಳಿಸಲಾಗಿದೆ. ಈ ಹೆಸರಿನೊಂದಿಗೆ ಅಭಿನಂದಿಸುವ ಪೋಸ್ಟರುಗಳನ್ನೂ ಇವರ ಪಕ್ಷದ ಬೆಂಬಲಿಗರು ಅಲ್ಲಲ್ಲಿ ಹಾಕಿದ್ದಾರೆ.
ಶಿಯೋಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರದ ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಾದ ಮೊಹ್ಸಿನ್, ರಿಯಾಜ್ ಮತ್ತು ಸೆಹ್ವಾಜ್ ಅವರ ಅಕ್ರಮ ಮನೆಗಳನ್ನು ಸರಕಾರ ನೆಲಸಮಗೊಳಿಸಿದೆ.