ಅಂಬುಜಾ ಸಿಮೆಂಟ್ಸ್‌ ಲಿಮಿಟೆಡ್‌ನಿಂದ 4.5% ಷೇರು ಮಾರಾಟಕ್ಕೆ ಮುಂದಾದ ಅದಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ಅದಾನಿ ಕುಟುಂಬ ಅಂಬುಜಾ ಸಿಮೆಂಟ್ಸ್‌ ಲಿಮಿಟೆಡ್‌ನಿಂದ 4.5% ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಮುಂದಿನ ವಾರ ಈ ಷೇರು ಮಾರಾಟ ನಡೆಯುವ ಸಾಧ್ಯತೆ ಇದೆ. ಇದು ಸೆಕೆಂಡರಿ ಸೇಲ್‌ ಆಗಿರಲಿದ್ದು, 3,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.

ಇದಕ್ಕಾಗಿ ಅದಾನಿ ಕುಟುಂಬದ ಸ್ಪೆಶಲ್‌ ಪರ್ಪಸ್‌ ವೆಹಿಕಲ್ಸ್‌ ಸಂಭವನೀಯ ಷೇರು ವಿಕ್ರಯಕ್ಕೆ ಬ್ಯಾಂಕ್‌ಗಳ ಅನುಮತಿ ಕೋರಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪವರ್‌, ಅದಾನಿ ವಿಲ್ಮರ್‌ ಷೇರುಗಳನ್ನು ಹೆಚ್ಚುವರಿ ನಿಗಾದಲ್ಲಿ ಇಡಲಾಗಿದೆ ಎಂದು ಎನ್‌ಎಸ್‌ಇ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!