Tuesday, March 28, 2023

Latest Posts

ಪ್ರೀತಿಸಿದ ಹುಡುಗಿಯನ್ನು ಚಾಕುವಿನಿಂದ ಚುಚ್ಚಿ ಹತ್ಯೆಗೈದ ಬಾಯ್‌ಫ್ರೆಂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ಜಮ್ಮು ಮತ್ತು ಕಾಶ್ಮೀರದಲ್ಲಿ ವೈದ್ಯೆ ಸುಮೇಧಾ ಶರ್ಮಾ, ತನ್ನ ಬಾಯ್‌ಫ್ರೆಂಡ್ ಜೋಹರ್ ಮೆಹಮೂದ್ ಗನೈಯಿಂದ ಭೀಕರವಾಗಿ ಹತ್ಯೆಯಾಗಿದ್ದಾಳೆ.
ಶ್ರೀನಗರದ ಜನಿಪುರದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

ಹಲವು ಕಾರಣಗಳಿಂದ ಇವರಿಬ್ಬರ ನಡುವೆ ಕಳೆದ ಕೆಲದಿನಗಳಿಂದ ಜಗಳ ನಡೆಯತ್ತಲೇ ಇತ್ತು. ಮೊದಲೇ ಆಕ್ರೋಶಗೊಂಡಿದ್ದ ಜೋಹರ್ ಮೆಹಮೂದ್ ಗನೈ ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆಗೈದಿದ್ದಾನೆ. ಬಳಿಕ ತಾನೂ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ.

ಕಮಲ್ ಕಿಶೋರ್ ಶರ್ಮಾ ಪುತ್ರಿ 26 ವರ್ಷದ ಸುಮೇಧಾ ಶರ್ಮಾ ಹಾಗೂ ಮೆಹಮೂದ್ ಗೈನೈ ಪುತ್ರ ಜೋಹರ್ ಮೆಹಮೂದ್ ಗನೈ ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಮದುವೆ ಸೇರಿದಂತೆ ಹಲವು ವಿಚಾರಗಳಲ್ಲಿ ಇವರಿಬ್ಬರು ಜಗಳವಾಡುತ್ತಿದ್ದರು ಅನ್ನೋ ಮಾತುಗಳು ಕೇಳಿಬಂದಿದೆ. ಆಕ್ರೋಶಗೊಂಡ ಮೆಹಮೂದ್ ಚಾಕುವಿನಲ್ಲಿ 4 ಚುಚ್ಚಿ ಹೈತ್ಯೆಗೈದಿದ್ದಾನೆ. ಬಳಿಕ ಫೇಸ್‌ಬುಕ್ ಮೂಲಕ ಪೋಸ್ಟ್ ಹಾಕಿದ್ದಾನೆ. ಕೆಲ ವೈಯುಕ್ತಿಕ ಕಾರಣಗಳಿಂದ ನಾನು ಬುದುಕು ಅಂತ್ಯಗೊಳಿಸುವುದಾಗಿ ಬರೆದುಕೊಂಡಿದ್ದಾನೆ.

ಈ ಕುರಿತು ಮೆಹಮೂದ್ ಆಪ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರಿಂದ ಮಾಹಿತಿ ಕಲೆಹಾಕಿದ ಪೊಲೀಸರು ಮೆಹಮೂದ್‌ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಸುಮೇಧಾ ಶರ್ಮಾ ವೈದ್ಯೆ ವೃತ್ತಿ ಮಾಡುತ್ತಿರುವ ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯಲ್ಲಿರುವುದು ಪತ್ತೆಯಾಗಿದೆ.

ಪೊಲೀಸರು ಮನೆಯ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಸುಮೇಧಾ ಶರ್ಮಾ ಹಾಗೂ ಮೆಹಮೂದ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಸುಮೇಧಾ ಈ ವೇಳೆ ಮೃತಪಟ್ಟಿದ್ದಳು. ಮೆಹಮೂದ್ ತೀವ್ರವಾಗಿ ಗಾಯಗೊಂಡಿದ್ದಾನೆ. ಇ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!