Tuesday, March 28, 2023

Latest Posts

ಜನತೆ ಶ್ರೀಮಂತರಾದರೆ ರಾಜ್ಯವೂ ಶ್ರೀಮಂತ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ:

ರಾಜ್ಯ ಶ್ರೀಮಂತವಾಗಿ ಖಜಾನೆಯಲ್ಲಿ ದುಡ್ಡಿದ್ದು ಜನತೆ ಬಡವರಾಗಿದ್ದರೆ ಅದು ಒಳ್ಳೆಯ ಆಡಳಿತವಲ್ಲ. ಜನರ ಕೈಗೆ ಮತ್ತು ಅವರ ಕೆಲಸಕ್ಕೆ ಶಕ್ತಿಯನ್ನು ತುಂಬಿ ಅವರನ್ನು ಶ್ರೀಮಂತರನ್ನಾಗಿಸಿದರೆ ಅದು ಒಳ್ಳೆಯ ಆಡಳಿತ. ರಾಜ್ಯದ ಜನತೆ ಶ್ರೀಮಂತರಾದರೆ ರಾಜ್ಯವೂ ಶ್ರೀಮಂತವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಡಾ. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿನ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಅಧಿಕಾರಕ್ಕಾಗಿ ರಾಜಕಾರಣ(ಪಾವರ ಪೊಲಿಟಿಕ್ಸ್) ಜನರಿಗಾಗಿ (ಪೀಪಲ್ಸ್ ಪಾಲಿಟಿಕ್ಸ್) ರಾಜಕಾರ ಎಂಬ ಎರಡು ಬಗೆಯ ರಾಜಕಾರಣವನ್ನಿಂದು ಕಾಣಬಹುದು.

ಇದರಲ್ಲಿ ನಾನು ಜನರ ರಾಜಕಾರಣದಲ್ಲಿ ನಂಬಿಕೆ ಇಟ್ಟವನು. ನಾವು ವಿಶ್ವಾಸವನ್ನಿಟ್ಟು ರಾಜಕಾರಣವನ್ನು ಮಾಡಿದರೆ ಜನತೆ ನಮ್ಮ ಮೇಲೆ ವಿಶ್ವಾಸವನ್ನು ಇಡುವಷ್ಟೇ ಅಲ್ಲ ನಮಗೆ ಬೆಂಬಲವನ್ನು ನೀಡುತ್ತಾರೆ. ನನ್ನನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಮತ ನೀಡಿ ಎಂದು ಇನ್ನು ಕೆಲವರು ಬಹಿರಂಗವಾಗಿ ಹೇಳುವವರಿದ್ದಾರೆ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೇ ಪ್ರತಿ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು.
ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ವೇದಿಕ ಮುಖ್ಯವಲ್ಲ. ವ್ಯವಸ್ಥೆ ಬಹಳ ಮುಖ್ಯ. ವ್ಯವಸ್ಥೆ ಸರಿಯಾಗಿ ನಡೆದರೆ ಜನ ಕಲ್ಯಾಣವಾಗುತ್ತದೆ. ವ್ಯಕ್ತಿಯ ಆಡಳಿತ ಆಡಳಿತವಲ್ಲ. ಪ್ರಜಾ ಪ್ರಭುತ್ವ ಯಶಸ್ವಿಗೆ ವ್ಯವಸ್ತ ಆಡಳಿತ ಆಡಳಿತಕ್ಕೆ ಬರಬೇಕು ಎಂದು ಎಂತಹ ಆಡಳಿತ ವ್ಯವಸ್ಥೆ ಇರಬೇಕು ಎನ್ನುವುದನ್ನು ಮಾರ್ಮಿಕವಾಗಿ ತಿಳಿಸಿದರು.

ಮತದಾರರು ಎಲ್ಲರಿಗೂ ಆಡಳಿತಕ್ಕೆ ಅವಕಾಶವನ್ನು ನೀಡುತ್ತಾರೆ. ನಾವು ಮಾಡಿದ ಕೆಲಸಗಳ ಕಾರ್ಡ್‌ಗಳನ್ನು ನೋಡಿ ನಮಗೆ ಬೆಂಬಲಿಸಿ. ಹಾವೇರಿ ಜಿಲ್ಲೆ ಅಭಿವೃದ್ಧಿಯಲ್ಲಿ ಸಂಬೃದ್ಧಿಯಾಗಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!