October 24, 2026
Saturday, October 24, 2026
spot_img

ಅನ್ನದಾತರಿಗೆ ಗಾಯದ ಮೇಲೆ ಬರೆ: ಮಳೆ-ಗಾಳಿಗೆ ನೆಲಕಚ್ಚಿದ ಭತ್ತದ ಬೆಳೆ

ಹೊಸದಿಗಂತ ವರದಿ ಬಳ್ಳಾರಿ:

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಗಾಳಿ ಸಮೇತ ಉತ್ತಮ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬೇಸಿಗೆ ವಾತಾವರಣ ಅನುಭವಿಸುತ್ತಿದ್ದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದು, ಜನರು ತಂಪಾದ ವಾತಾವರಣ ಅನುಭವಿಸಿದರು.

ಶುಕ್ರವಾರ ಸಂಜೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಸಮೇತ ಮಳೆಯಾಗಿದ್ದು, ರೈತರ ನಾನಾ ಬೆಳೆಗಳು ನೆಲಕ್ಕುರುಳಿವೆ. ಜಿಲ್ಲೆಯ ತೆಕ್ಕಲಕೋಟೆ, ಕಂಪ್ಲಿ, ಸಿರುಗುಪ್ಪ, ಖರ್ಚಿಗನೂರು ಸೇರಿದಂತೆ ನಾನಾ ಕಡೆ ಬೆಳೆದು ನಿಂತಿದ್ದ ಭತ್ತದ ಬೆಳೆಗಳು ಹಾನಿಗಿಡಾಗಿವೆ.

ಮಳೆ ಕೊರತೆಯಿಂದ ಸಂಕಷ್ಟದಲ್ಲಿ ಸಿಲುಕಿದ್ದ ಅನ್ನದಾತರನ್ನು ಮತ್ತಷ್ಟು ಸoಕಷ್ಟಕ್ಕೆ ಸಿಲುಕಿಸಿದೆ. ಶನಿವಾರ ಸಂಜೆ ಸುರಿದ ಮಳೆಯಿಂದ ನಗರದ ನಾನಾ ಭಾಗಗಳಲ್ಲಿ ತಗ್ಗು ಗುಂಡಿಗಳಲ್ಲಿ ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಜಿಲ್ಲೆಯಲ್ಲಿ ಅಕ್ಷರಸಹ ಮಲೆನಾಡಿನoತೆ ವಾತಾವರಣ ಮುಂದುವರೆದಿದ್ದು, ಜಿಟಿ ಜಿಟಿ ಮಳೆ ಮುಂದುವರೆದಿದೆ.

Must Read

Skip to toolbar