ಅಂತಿಮ ದರ್ಶನಕ್ಕೆ ಹೆಚ್ಚುವರಿ ಎರಡು ಗಂಟೆ ವಿಸ್ತರಣೆ : ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ಸಿದ್ದೇಶ್ವರ ಸ್ವಾಮೀಜಿ ದೈವಾದೀನರಾಗಿದ್ದು, ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಭಕ್ತರು ಅಂತಿಮ ದರ್ಶನ ಪಡೆದಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಸಂಜೆ ಐದು ಗಂಟೆಗೆ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ ಜನಸಾಗರ ನೋಡಿ ಇನ್ನೂ ಹೆಚ್ಚು ಭಕ್ತರು ಬರುವ ಸಾಧ್ಯತೆ ಇರುವ ಕಾರಣ ಸಿಎಂ ಬೊಮ್ಮಾಯಿ ದರ್ಶನ ಸಮಯವನ್ನು ಇನ್ನೂ ಎರಡು ಮೂರು ಗಂಟೆ ವಿಸ್ತರಿಸುತ್ತೇವೆ ಎಂದು ಹೇಳಿದ್ದಾರೆ.

ಇದಕ್ಕೆ ಎಲ್ಲರೂ ಸಹಕರಿಸಿ ಎಂದು ಸಿಎಂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಪ್ರತೀ ಭಕ್ತರು ಶಾಂತ ರೀತಿಯಿಂದ ಶ್ರೀಗಳ ದರ್ಶನ ಪಡೆದು ಹೊರಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಸಂಜೆ ೫ ಗಂಟೆಗೆ ಸರ್ಕಾರಿ ಗೌರವ ಸಲ್ಲಿಸುತ್ತೇವೆ. ತದನಂತರವೂ ದರ್ಶನಕ್ಕೆ ಅವಕಾಶ ಇದೆ. ಜ್ಞಾನಯೋಗಾಶ್ರಮಕ್ಕೆ ತೆರಳಿದ ನಂತರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!