ನಾನು ಇಸ್ಲಾಂ ಧರ್ಮ ಅನುಸರಿಸುತ್ತಿಲ್ಲ: ಉಡುಗೆಗಳ ಕುರಿತು ಮಾತನಾಡಿದವರಿಗೆ ಉರ್ಫಿ ತಿರುಗೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್ ನಟಿ ಉರ್ಫಿ ಜಾವೇದ್ ತಮ್ಮ ವಿಭಿನ್ನ ಉಡುಗೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಉರ್ಫಿಯ ಅವತಾರ ಬಗ್ಗೆ ಯಾರಾದರೂ ಏನಾದರು ಅಂದರೆ ಅದಕ್ಕೆ ಖಡಕ್ ಉತ್ತರ ನೀಡುವ ಮೂಲಕವೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಇದೀಗಉರ್ಫಿ ವಿಚಿತ್ರ ಬಟ್ಟೆಗಳನ್ನು ನೋಡಿ ಇಸ್ಲಾಂ ಧರ್ಮದಲ್ಲಿ ಇಂಥ ಬಟ್ಟೆಗಳನ್ನು ಧರಿಸಿ ರಸ್ತೆಯಲ್ಲಿ ಓಡಾಡಲು ಅನುಮತಿ ಇದಿಯಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದರು. ಜೀನ್ಸ್ ಕೂಡ ಧರಿಸಲು ಅನುಮತಿಸದ ಸಂಪ್ರದಾಯವಾದಿ ಕುಟುಂಬದಿಂದ ಬಂದ ಉರ್ಫಿ ಹೀಗೆಲ್ಲ ವಿಚಿತ್ರವಾಗಿ ಬಟ್ಟೆ ಧರಿಸಿ ಮುಂಬೈ ಬೀದಿ ಸುತ್ತಾಡುತ್ತಿರುವುದು ಅನೇಕರಿಗೆ ಅಚ್ಚರಿ ಮೂಡಿಸಿತ್ತು.

ಧರ್ಮವನ್ನು ಟಾರ್ಗೆಟ್ ಮಾಡಿದ ಟ್ರೋಲಿಗರಿಗೆ ಉರ್ಫಿ ಈಗ ಖಡಕ್ ಉತ್ತರ ನೀಡಿದ್ದಾರೆ. ತಾನು ಇಸ್ಲಾಂ ಧರ್ಮ ಅನುಸರಿಸುತ್ತಿಲ್ಲ ಅಲ್ಲದೆ ಯಾವುದೇ ಧರ್ಮವನ್ನು ಫಾಲೋ ಮಾಡಲ್ಲ ಎಂದು ಉರ್ಫಿ ಖಡಕ್ ಆಗಿ ಹೇಳಿದ್ದಾರೆ.

‘ಹಿಂದು ವಾದಿಗಳು ನನನ್ನು ಅಟ್ಯಾಕ್ ಮಾಡುವ ಮೊದಲು ನಾನು ಇದನ್ನು ನಿಮ್ಮೆಲ್ಲರಿಗೂ ಹೇಳುತ್ತೇನೆ. ನಾನು ಇಸ್ಲಾಂ ಧರ್ಮವನ್ನು ಫಾಲೋ ಮಾಡುತ್ತಿಲ್ಲ, ಯಾವುದೇ ಧರ್ಮವನ್ನು ಅನುಸರಿಸುತ್ತಿಲ್ಲ. ಜನರು ತಮ್ಮ ಧರ್ಮದ ಕಾರಣಕ್ಕಾಗಿ ಕಿತ್ತಾಡುವುದು ಬೇಡಎಂದು ಹೇಳಿದ್ದಾರೆ.
ಉರ್ಫಿ ಮಾತಿಗೆ ತರಹೇವಾರಿ ಕಾಮೆಂಟ್ ಹರಿದು ಬಂದಿದೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಉರ್ಫಿ ಅಥವಾ ಇಂಥ ಮಹಿಳೆಯರು ಅಫ್ಘಾನಿಸ್ತಾನದಲ್ಲಿ ಇರಬೇಕಿತ್ತು’ ಎಂದು ಹೇಳಿದ್ದಾರೆ.

ಈ ಮೊದಲು ಉರ್ಫಿ ಧರ್ಮದ ಬಗ್ಗೆ ಮಾತನಾಡಿ, ‘ನಾನು ಮುಸ್ಲಿಂ ಹುಡುಗಿ, ಹಾಗಾಗಿ ನಾನು ಏನೇ ಮಾಡಿದರು ಅಥವಾ ಕೆಲವು ರೀತಿಯ ಬಟ್ಟೆಗಳನ್ನು ಧರಿಸಿದಾಗ ಅದು ಬಹಳಷ್ಟು ಜನರಿಗೆ ಇಷ್ಟವಾಗುವುದಿಲ್ಲ. ನನ್ನ ಧರ್ಮವು ಪ್ರತಿ ಬಂಧಕವಾಗಿದೆ’ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!