ಆದಿಪುರುಷ್‌ ಪೋಸ್ಟರ್ ನಮ್ಮ ಪೋಸ್ಟರ್‌ನಿಂದಲೇ ಕಾಪಿ ಮಾಡಿದ್ದು: ಖ್ಯಾತ ಅನಿಮೇಷನ್ ಸ್ಟುಡಿಯೋ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಭಾಸ್ ನಾಯಕನಾಗಿ, ಓಂ ರಾವುತ್ ನಿರ್ದೇಶನದಲ್ಲಿ ಅದ್ಧೂರಿ ಪೌರಾಣಿಕ ಚಿತ್ರ “ಆದಿಪುರುಷ್” ತಯಾರಾಗುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಅನ್ನು ದಸರಾ ಉಡುಗೊರೆಯಾಗಿ ಚಿತ್ರತಂಡ ಅಯೋಧ್ಯೆ ಸ್ಥಳದಲ್ಲಿ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಟೀಸರ್ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ನೆಗೆಟಿವ್‌ ಕಮೆಂಟ್‌ ಸೂಚಿಸಿದ್ದಾರೆ.

ಅಲ್ಲದೆ, ಟೀಸರ್‌ನಲ್ಲಿರುವ ಕೆಲವು ಪಾತ್ರಗಳು ಮತ್ತು ದೃಶ್ಯಗಳು ಸಹ ಆಕ್ಷೇಪಾರ್ಹವಾಗಿದ್ದು, ಈ ಚಿತ್ರವು ಟೀಕೆಗಳನ್ನು ಎದುರಿಸುತ್ತಿದೆ. ಇದೀಗ ಖ್ಯಾತ ಅನಿಮೇಷನ್ ಕಂಪನಿಯೊಂದು ಆದಿಪುರುಷ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ತಮ್ಮ ಶಿವನ ಪೋಸ್ಟರ್ ನ ಕಾಪಿ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಸಂಬಂಧ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

“ವಾನರ ಸೇನಾ ಸ್ಟುಡಿಯೋಸ್” ಎಂಬ ಅನಿಮೇಷನ್ ಕಂಪನಿಯು ಪೋಸ್ಟರ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಆದಿಪುರುಷ್‌ನ ಫಸ್ಟ್ ಲುಕ್ ಪೋಸ್ಟರ್‌ನ ತಯಾರಕರು ತಮ್ಮ ಭಗವಾನ್ ಶಿವನ ಪೋಸ್ಟರ್‌ನಿಂದ ಪಡೆದಿದ್ದಾರೆಂದು ಆರೋಪಿಸಿದೆ. ಈ ಪೋಸ್ಟರ್‌ನ ಸೃಷ್ಟಿಕರ್ತ ‘ವಾನರ ಸೇನೆ’ ಎಂದು ಉಲ್ಲೇಖಿಸದಿರುವುದು ತಪ್ಪು ಎಂದು ಕಮೆಂಟ್‌ ಮಾಡಿದೆ.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!