ತಮ್ಮ ಮೊದಲ ಸಂಭಾವನೆಯೆಷ್ಟು ಎಂಬ ಸತ್ಯ ಬಿಚ್ಚಿಟ್ಟ ಸಿದ್ದಾರ್ಥ್‌ ಮಲ್ಹೋತ್ರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಟೂಡೆಂಟ್‌ ಆಫ್‌ ದಿ ಇಯರ್‌ ಚಿತ್ರದ ಮೂಲಕ ಬಾಲಿವುಡ್‌ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಸಿದ್ದಾರ್ಥ್‌ ಮಲ್ಹೋತ್ರಾ ಈ ವರ್ಷ ಬಿಡುಗಡೆಯಾದ ಷೇರ್‌ ಶಾ ಚಿತ್ರದಲ್ಲಿನ ಅದ್ಭುತ ಪರ್ಫಾಮೆನ್ಸ್‌ ನಿಂದ ಜನರ ಮೆಚ್ಚುಗೆ ಗಳಿಸಿದ್ದಾರೆ. ಇದಲ್ಲದೇ ಹಲವು ಚಿತ್ರಗಳಲ್ಲಿ ಸಖತ್‌ ಹ್ಯಾಂಡ್ಸಮ್‌ ಆಗಿ ಕಾಣಿಸಿಕೊಂಡಿರುವ ಅವರನ್ನು ಸಾಮಾನ್ಯವಾಗಿ ಎಲ್ಲರೂ ನೆಚ್ಚಿಕೊಳ್ಳುತ್ತಾರೆ.

ಇಂತಹ ಸಿದ್ದಾರ್ಥ್‌ ಮಲ್ಹೋತ್ರಾ ತಮ್ಮ ಮೊದಲ ಸಂಭಾವನೆ ಯೆಷ್ಟಿತ್ತು ಎಂಬುದನ್ನು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಎಷ್ಟು ಅಂತ ಕೇಳಿದರೆ ನೀವು ಖಂಡಿತ ಶಾಕ್‌ ಆಗುತ್ತೀರಿ. ಸಂದರ್ಶನದ ಸಮಯದಲ್ಲಿ, ಸಿದ್ಧಾರ್ಥ್ ಅವರು ಬ್ಯಾಂಕ್ ಖಾತೆಯನ್ನು ಹೊಂದಿರದ ಸಮಯದಲ್ಲಿ ಅವರ ಮೊದಲ ವೇತನ ಚೆಕ್ ರೂ 7000 ಎಂದು ಬಹಿರಂಗಪಡಿಸಿದ್ದಾರೆ.

ಯಸ್‌, ಇಂದು ಬಾಲಿವುಡ್‌ ನಲ್ಲಿ ಕೋಟಿಗಟ್ಟಲೇ ಸಂಭಾವನೆ ಪಡೆಯುವ ನಟ ತನ್ನ ವೃತ್ತಿಜೀವನ ಪ್ರಾರಂಭಿಸಿದ್ದು ಅಷ್ಟು ಕಡಿಮೆ ವೇತನದಿಂದ ಎಂಬುದು ಆಶ್ಚರ್ಯವೆನಿಸಿದರೂ ಸತ್ಯ. ಇನ್ನು ಸಂದರ್ಶನದ ವೇಳೆ ತಮ್ಮ ಹೋರಾಟದ ದಿನಗಳ ಬಗ್ಗೆ, ಅವರು ನಟನಾಗಲು ನಿರ್ಧರಿಸಿದಾಗ ಅವರ ಕುಟುಂಬವು ಗಂಭಿರವಾಗಿ ಪರಿಗಣಿಸದಿರುವ ಕುರಿತೂ ಹಂಚಿಕೊಂಡಿದ್ದಾರೆ.

ಪ್ರಸ್ತುತ ಸಿದ್ಧಾರ್ಥ್ ಮಲ್ಹೋತ್ರಾ ‘ಥ್ಯಾಂಕ್ ಗಾಡ್’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಇದರಲ್ಲಿ ಅಜಯ್ ದೇವಗನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಅಕ್ಟೋಬರ್ 24 ರಂದು ಥಿಯೇಟರ್‌ಗೆ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!