ಕಾಂಟ್ರಾಕ್ಟ್‌ ಮುಗಿಸಿದ ಸಿಟ್ಟಲ್ಲಿ ಸಮೋಸಾ ಒಳಗೆ ಬ್ಯಾಂಡೇಜ್‌, ಕಾಂಡೋಮ್‌ ತುಂಬಿಸಿ ಕಳಿಸಿದ ಕಂಪನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾರಾಷ್ಟ್ರದ ಪುಣೆಯ ಕಂಪನಿಯ ಕ್ಯಾಂಟೀನ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ಕ್ಯಾಂಟೀನ್‌ ಕಾಂಟ್ರಾಕ್ಟ್‌ ಮುಗಿಸಿದ ಸಿಟ್ಟಿನಲ್ಲಿ ಆಫೀಸ್‌ನಿಂದ ಆರ್ಡರ್‌ ಮಾಡಿದ ಸಮೋಸಾದಲ್ಲಿ ಬ್ಯಾಂಡೇಜ್‌, ಕಾಂಡೋಮ್‌, ಗುಟ್ಕಾ, ಕಲ್ಲು ಹಾಗೂ ಇನ್ನಿತರ ಅಸಹ್ಯಕರ ವಸ್ತುಗಳನ್ನು ಹಾಕಿ ಸಮೋಸಾ ತಯಾರಿಸಿ ಪೂರೈಕೆ ಮಾಡಲಾಗಿದೆ.

ಸಮೋಸಾ ತೆಗೆದು ನೋಡಿದ ಕಂಪನಿಯ ಎಂಪ್ಲಾಯಿಸ್‌ ಹಾಗೂ ಇತರ ಕ್ಲೈಂಟ್ಸ್‌ ಅಸಹ್ಯಪಟ್ಟುಕೊಂಡಿದ್ದಾರೆ. ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಈ ಹಿಂದೆಯೇ ಒಮ್ಮೆ ಸಮೋಸಾದಲ್ಲಿ ಬ್ಯಾಂಡೇಜ್‌ ಪತ್ತೆಯಾಗಿತ್ತು. ಇದರಿಂದ ಕಂಪನಿ ಸಿಟ್ಟಿನಲ್ಲಿ ಕಾಂಟ್ರಾಕ್ಟ್‌ ಮುಗಿಸುವುದಾಗಿ ಹೇಳಿತ್ತು. ಸಿಟ್ಟಿನಲ್ಲಿ ಕಂಪನಿಗೆ ಕೆಟ್ಟ ಹೆಸರು ಬರಲಿ ಎಂದು ಹೀಗೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!