Wednesday, September 27, 2023

Latest Posts

ಶಕ್ತಿಯೋಜನೆಯಿಂದ ನಮಗೆ ಲಾಸ್: ಖಾಸಗಿ ವಾಹನ ಚಾಲಕರಿಂದ ಬೆಂಗಳೂರು ಬಂದ್‌ಗೆ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರ ಖುಷಿಗೆ ಪಾರವೇ ಇಲ್ಲ.ಸ್ವಲ್ಪ ಸಮಯ ಕಾದರೂ ಪರವಾಗಿಲ್ಲ ಎಂದು ಮಹಿಳೆಯರು ಫ್ರೀ ಬಸ್ ಹತ್ತುತ್ತಿದ್ದಾರೆ.

ಇದರಿಂದಾಗಿ ಖಾಸಗಿ ವಾಹನ ಚಾಲಕರು ಹಾಗೂ ಮಾಲೀಕರು ಲಾಸ್‌ನಲ್ಲಿದ್ದಾರೆ. ಈ ಕಾರಣದಿಂದಾಗಿ ಖಾಸಗಿ ಸಾರಿಗೆ ಒಕ್ಕೂಟ ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ.

ಈ ಮೊದಲೇ ತಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಲಾಗಿತ್ತು. ಖಾಸಗಿ ವಾಹನ ಒಕ್ಕೂಟ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಮಾತುಕತೆ ನಡೆಸಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಯಾವುದೇ ಬದಲಾವಣೆ ಆಗದ ಕಾರಣ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.

ಚಾಲಕರಿಗೆ ಮಾಸಿಕ ಧನ, ರ‍್ಯಾಪಿಡೋ ಬೈಕ್‌ಗಳ ನಿಷೇಧ, ವೈಟ್ ಬೋರ್ಡ್ ವಾಹನಗಳ ಬಾಡಿಗೆ ಬ್ರೇಕ್, ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಉಲಾ ಓಬರ್ ನಿರ್ಬಂಧ, ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ಅನ್ವಯ ಹೀಗೆ ಸಾಕಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!