ಹಿಟ್-2ಸಿನಿಮಾ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಕಥೆನಾ? ಅಡವಿ ಶೇಷ್‌ ಪ್ರತಿಕ್ರಿಯೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾನಿ ನಿರ್ಮಾಪಕನಾಗಿ ಶೈಲೇಶ್ ಕೊಲನ್ ನಿರ್ದೇಶನದಲ್ಲಿ ಅಡಿವಿ ಶೇಷ್ ನಾಯಕನಾಗಿ‌ ನಟಿಸಿರುವ ಹಿಟ್ 2 ಚಿತ್ರ ತೆರೆಗೆ ಬರಲಿದೆ. ಈ ಸಿನಿಮಾ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಶ್ರದ್ಧಾ ವಾಕರ್‌ ಕೊಲೆಗೆ ಸಂಬಂಧಿಸಿದ್ದಾ ಎಂಬ ಗುಮಾನಿ ಹರಿದಾಡುತ್ತಿದೆ. ಈಗಾಗಲೇ ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾದ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳನ್ನು ಹೊಂದಿರಲಿದೆ. ಚಿತ್ರ ಬಿಡುಗಡೆ ಸಮೀಪಿಸುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಇತ್ತೀಚೆಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಅಡವಿ ಶೇಷ್ ಸಿನಿಮಾದ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಒಬ್ಬ ಹುಡುಗಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಲಾಗಿದೆ. ಕೊಲೆಗಾರ ಯಾರು, ಹೇಗೆ ಸಿಕ್ಕಿಬೀಳುತ್ತಾನೆ ಅನ್ನೋದು ಕಥೆ ಎಂಬುದು ಟ್ರೈಲರ್ ನೋಡಿದವರಿಗೆ ಅರ್ಥವಾಗುತ್ತದೆ. ಆದರೆ ಇತ್ತೀಚೆಗೆ ನೋಯ್ಡಾದಲ್ಲಿ ಶ್ರದ್ಧಾ ವಾಕರ್ ಎಂಬ ಯುವತಿಯನ್ನು ಅಫ್ತಾಬ್ ಎಂಬ ವ್ಯಕ್ತಿ ಕೊಂದು ತುಂಡು ತುಂಡಾಗಿ ಕತ್ತರಿಸಿದ್ದ. ಸದ್ಯ ಅಫ್ತಾಬ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಹಿಟ್ 2 ಟ್ರೇಲರ್‌ನಲ್ಲಿ ಸಾವಿಗೀಡಾದ ಹುಡುಗಿಯ ಹೆಸರು ಕೂಡಾ ಶ್ರದ್ಧಾ. ಈ ವಿಚಾರವನ್ನು ಅಡಿವಿ ಶೇಷ್ ಸಂದರ್ಶನವೊಂದರಲ್ಲಿ ಈ ಗಟನೆ ಮತ್ತು ಸಿನಿಮಾಗೆ ಹೋಲಿಕೆ ಮಾಡಿ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅಡಿವಿ ಶೇಷ್ “ಹಿಟ್ 2 ಚಿತ್ರದ ಹುಡುಗಿಯ ಹೆಸರು ಶ್ರದ್ಧಾ, ನೋಯ್ಡಾದಲ್ಲಿ ಕೊಲೆಯಾದ ಹುಡುಗಿಯ ಹೆಸರೂ ಶ್ರದ್ಧಾ, ಪ್ರಕರಣ ನಮ್ಮ ಚಿತ್ರದಲ್ಲೂ ಇದೆ. ಹೀಗೆ ಆಗಿರುವುದು ಆಕಸ್ಮಿಕವಾಗಿ. ಶ್ರದ್ಧಾ ವಾಕರ್ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಆದರೆ ನಿರ್ದೇಶಕ ಶೈಲೇಶ್ ಒಂದು ವರ್ಷದ ಹಿಂದೆಯೇ ಈ ಕಥೆಯನ್ನು ಮಾಡಿದ್ದಾರೆ.‌ ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳನ್ನು ನಾವು ತೆಗೆದುಕೊಂಡಿಲ್ಲ. ಇದು ಕೇವಲ ಕಾಕತಾಳೀಯ ಅಷ್ಟೇ. ಇಂತಹ ಕ್ರೌರ್ಯ ಘಟನೆಗಳು ನಡೆಯಬಾರದೆಂಬುದು ನಮ್ಮ ಉದ್ದೇಶವಷ್ಟೇ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!