ಒಂದೇ ಹೆಸರಿದ್ದರೆ ಯುಎಇ ಪ್ರವೇಶ ನಿಷಿದ್ಧ: ಹೊಸ ನಿಯಮ ತಂದ ಎಮಿರೇಟ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಮ್ಮ ದೇಶಕ್ಕೆ ಪ್ರವೇಶಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ನಿಯಮವನ್ನು ತಂದಿದೆ. ಒಂದು ಹೆಸರಿ ಇಟ್ಟುಕೊಂಡಿರುವ ಪ್ರಯಾಣಿಕರನ್ನು ಇನ್ನು ಮುಂದೆ ಯುಎಇಗೆ ಅನುಮತಿಸಲಾಗುವುದಿಲ್ಲ ಎಂದು ಘೋಷಿಸಿದೆ. ಈ ನಿರ್ಧಾರವನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಹೊಸ ನಿರ್ಧಾರದ ಬಗ್ಗೆ ಪ್ರಯಾಣಿಕರು ತಿಳಿದಿರಬೇಕು ಎಂದು ಏರ್ ಇಂಡಿಯಾದಂತಹ ಭಾರತೀಯ ವಿಮಾನಯಾನ ಸಂಸ್ಥೆಗಳು ಹೇಳಿವೆ.

UAE ತಮ್ಮ ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿನ ಪ್ರಯಾಣಿಕರನ್ನು ತಮ್ಮ ದೇಶಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ. ಹೆಸರು ಕನಿಷ್ಠ ಎರಡು ಪದಗಳನ್ನು ಹೊಂದಿರಬೇಕು. ಕುಟುಂಬದ ಹೆಸರು ಅಥವಾ ಹೆಸರಿನ ಪಕ್ಕದಲ್ಲಿರುವ ಇನ್ನೊಂದು ಪದವಿದ್ದರೆ ಮಾತ್ರ ಯುಎಇ ಅನುಮತಿಸಲಾಗುತ್ತದೆ. ಇದರ ಹೊರತಾಗಿ, INAD (ಇನ್‌ ಅಡ್ಮಿಸಬಲ್‌ ಪ್ಯಾಸೆಂಜರ್) ಆಗಿ ಪರಿಗಣಸಲಾಗುತ್ತದೆ. ವಿಮಾನಯಾನ ಸಂಸ್ಥೆಗಳು ಅಂತಹ ಪ್ರಯಾಣಿಕರನ್ನು ವಾಪಸ್ ಕಳುಹಿಸುತ್ತವೆ. ಯುಎಇ ಇನ್ನು ಮುಂದೆ ಅಂತಹ ಹೆಸರಿನವರಿಗೆ ವೀಸಾಗಳನ್ನು ನೀಡುವುದಿಲ್ಲ. ವೀಸಾ ಪಡೆದರೂ ಕೂಡಾ ಅವರು INAD ಅಡಿಯಲ್ಲಿ ದೇಶವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

ಅವರನ್ನು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗುವುದು. ವಿಸಿಟ್ ವೀಸಾ, ಎಂಪ್ಲಾಯ್ಮೆಂಟ್ ವೀಸಾ, ವೀಸಾ ಆನ್ ಅರೈವಲ್, ಟೆಂಪರರಿ ವೀಸಾದಲ್ಲಿ ಬರುವವರಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಯುಎಇ ನಿವಾಸಿ ಕಾರ್ಡುದಾರರಿಗೆ ಇದು ಅನ್ವಯಿಸುವುದಿಲ್ಲ ಎಂದು ಯುಎಇ ಸರ್ಕಾರ ಈಗಾಗಲೇ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!