Wednesday, November 29, 2023

Latest Posts

ಚೀನಾದ ಫಾಕ್ಸ್‌ ಕಾನ್‌ ಉತ್ಪಾದನಾ ಘಟಕದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದಲ್ಲಿನ ಫಾಕ್ಸ್‌ ಕಾನ್‌ ಉತ್ಪಾದನಾ ಘಟಕವು ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಘಟಕದಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು, ಅದರಲ್ಲೂ ಹೊಸತಾಗಿ ಸೇರಿಕೊಂಡ ಕೆಲಸಗಾರರು ಕಂಪನಿಯ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಕೆಲಸಗಾರರು ಸಿಸಿಟಿವಿಗಳನ್ನ, ಕಿಟಕಿಗಳನ್ನು ಒಡೆದು ಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಕಂಪನಿಯು ಹೊಸತಾಗಿ ಸೇರೊಕೊಂಡ ಕಾರ್ಮಿಕರ ಬೋನಸ್‌ ವೇತನವನ್ನು ತಡೆಹಿಡಿದ ಕಾರಣ ಝೆಂಗ್‌ಝೌ ನಗರದಲ್ಲಿರುವ ಫಾಕ್ಸ್‌ ಕಾನ್‌ ಅತಿದೊಡ್ಡ ಕಾರ್ಖಾನೆಯಲ್ಲಿ ಬೃಹತ್‌ ಪ್ರತಿಭಟನೆಗಳು ಭುಗಿಲೆದ್ದಿವೆ. ಇದರಿಂದಾಗಿ ಕಾರ್ಖಾನೆಯ ಸುತ್ತಮುತ್ತ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇದು ಅತಿ ಕಠಿಣ ಕೋವಿಡ್‌ ನಿಯಮಗಳಿಂದ ಬೇಸತ್ತಿರುವ ಜನರ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಮೂಲಗಳು ವರದಿ ಮಾಡಿವೆ.

ಬೋನಸ್‌ ವೇತನವನ್ನು ಕಂಪನಿಯು ತಡೆಹಿಡಿದಿದ್ದರಿಂದ ಬುಧವಾರದಂದು ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ. “ನಮ್ಮ ವೇತನವನ್ನು ನಮಗೆ ಕೊಡಿ!”, ಎನ್ನುತ್ತ ಲಾಠಿಹಿಡಿದ ಕಾರ್ಮಿಕರು ಕಾರ್ಖಾನೆಯನ್ನು ಸುತ್ತುವರೆದಿದ್ದಾರೆ. ಇದಲ್ಲದೇ ಕೋವಿಡ್‌ ಧನಾತ್ಮಕ ಪರೀಕ್ಷೆ ಹೊಂದಿರುವವರೊಂದಿಗೆ ವಸತಿ ಹಂಚಿಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದೂ ಕೂಡ ಕೆಲವರು ದೂರಿದ್ದಾರೆ ಎನ್ನಲಾಗಿದೆ.

ಆದರೆ ಈ ಆರೋಪಗಳನ್ನು ಪಾಕ್ಸ್‌ ಕಾನ್‌ ತಳ್ಳಿ ಹಾಕಿದ್ದು ಎಲ್ಲಾ ಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಕಾರ್ಮಿಕರು ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಹೇಳಿದೆ.

ಕೋವಿಡ್‌ ನಿರ್ಬಂಧಗಳಿಂದ ಈಗಾಗಲೇ ಪೂರೈಕೆ ವ್ಯತ್ಯಯವುಂಟಾಗಿದ್ದು ಐಫೋನ್‌ ಕಂನಿಯು ಚೀನಾವನ್ನು ತೊರೆಯಲು ಯೋಚಿಸಿದೆ. ಪ್ರಸ್ತುತ ಪ್ರತಿಭಟನೆಗಳಿಂದ ಮತ್ತಷ್ಟು ಸಮಸ್ಯೆಗಳು ಉದ್ಭವಿಸಿದ್ದು ಐಫೋನ್‌ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯವನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!