Sunday, August 14, 2022

Latest Posts

ಆಡಳಿತ ಯಂತ್ರದ ದುರುಪಯೋಗ ಪಡಿಸಿಕೊಂಡ ಇಂದಿರಾ ಗಾಂಧಿ: ಕೃಷ್ಣಾ ಜೋಶಿ

ಹೊಸ ದಿಗಂತ ವರದಿ, ಕಲಬುರಗಿ:

ಸವಾ೯ಧಿಕಾರಿ ಧೋರಣೆ ನಡೆಸಿ ಕರಾಳ ದಿನಕ್ಕೆ ಸಾಕ್ಷಿಯಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತದ ಯಂತ್ರದ ದುರುಪಯೋಗ ಪಡಿಸಿಕೊಂಡು 1975ರಲ್ಲಿ ತುತು೯ ಪರಿಸ್ಥಿತಿ ಹೇರಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯದ ಭೌದ್ಧಿಕ ಪ್ರಮುಖ ಕೃಷ್ಣಾ ಜೋಶಿ ಹೇಳಿದರು.

ಅವರು ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ತುತು೯ ಪರಿಸ್ಥಿತಿಯ ಕರಾಳ ದಿನದ ನಿಮಿತ್ತ ವಿಶೇಷ ಕಾಯ೯ಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.

ಭಾರತ ದೇಶವು ಸ್ವಾತಂತ್ರ್ಯ ನಂತರದ ಸಮಯದಲ್ಲಿ ಸಹ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದೆ. ಸ್ವಾತಂತ್ರ್ಯವನ್ನೆ ಹರಣ ಮಾಡಿದ ಕರಾಳ ಘಟನೆ ದೇಶದಲ್ಲಿ ತುತು೯ ಪರಿಸ್ಥಿತಿ ಹೇರಿದ್ದಾಗಿದೆ ಎಂದರು.

ಭಾರತದ ಇತಿಹಾಸದಿಂದ ಜ್ಞಾನವನ್ನು ಪಡೆದುಕೊಂಡು, ಉಜ್ವವ ಭವಿಷ್ಯ ರೂಪಿಸುವ ಮೂಲಕ ಯುವಕರು ಸಾಗಬೇಕೆಂಬ ಸಂದೇಶ ಕೊಡುವ ಬದಲು, ಇಂದಿರಾ ಗಾಂಧಿ ಅವರು ದೇಶದಲ್ಲಿ ಅಶಾಂತಿ ವಾತಾವರಣವನ್ನು ಹರಡಿಸಿದರು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸವಾ೯ಧಿಕಾರಿ ಧೋರಣೆ ಅನುಸರಿಸುವ ಮೂಲಕ ಈ ದೇಶಕ್ಕೆ ಕಪ್ಪು ಚುಕ್ಕೆಯನ್ನು ತಂದಿಟ್ಟಿದ್ದರು. ಇಂದಿರಾ ಗಾಂಧಿ ಅವರು 1971ರ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಆಡಳಿತ ಯಂತ್ರದ ದುರುಪಯೋಗ ಪಡಿಸಿಕೊಂಡಿದ್ದು,ದುಖದ ಸಂಗತಿಯಾಗಿದೆ ಎಂದರು.

ಯುದ್ಧಗಳು ಸಂಭವಿಸಿದಾಗ ತುತು೯ ಪರಿಸ್ಥಿತಿ ಹೇರಬೇಕಾಗುವ ಅನಿವಾರ್ಯತೆ ಇರುತ್ತದೆ. ಅದಕ್ಕಾಗಿ ರಾಷ್ಟ್ರಪತಿಯವರ ಅನುಮತಿ ಸಹ ಬೇಕಾಗುತ್ತದೆ. ಇದನ್ನು ಯಾವುದೇ ಯೋಚಿಸದೇ ಸವಾ೯ಧಿಕಾರಿ ಧೋರಣೆ ನಡೆಸಿ,ಕರಾಳ ದಿನಕ್ಕೆ ಇಂದಿರಾ ಗಾಂಧಿ ಸಾಕ್ಷಿಯಾಗಿದ್ದರು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್,ಶಾಸಕ ಅವಿನಾಶ್ ಜಾಧವ, ಬಿಜೆಪಿ ಅಧ್ಯಕ್ಷ ಸಿದ್ದಾಜೀ ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ,ದಯಾಘನ ಧಾರವಾಡಕರ್ ಮಹಾದೇವ ಬೆಳಮಗಿ, ಸಿದ್ದರಾಮ ಸಂಗೋಳಗಿ ಸೇರಿದಂತೆ ಪಕ್ಷದ ಹಲವರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss