ದಿನಭವಿಷ್ಯ | ವಿವಾಹಿತರಿಗೆ ಸಂತೋಷದ ಸುದ್ದಿ ಕೇಳಿಬಂದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ

ಕೆಲವು ಮಹತ್ವದ ವಿಚಾರಗಳಲ್ಲಿ ತುರ್ತು ನಿರ್ಧಾರ ತಾಳಬೇಕಾದೀತು. ಚಿಂತೆ ಬೇಡ, ನಿಮ್ಮ ನಿರ್ಧಾರ ಉತ್ತಮ ಫಲವನ್ನೆ ನೀಡುವುದು.

ವೃಷಭ
ನಿಮ್ಮ ಉದ್ದೇಶ ಈಡೇರುವ ತನಕ ನಿಮ್ಮ ಕಾರ್ಯ ನಿಲ್ಲಿಸದಿರಿ. ಹಿನ್ನಡೆಗಳಿಗೆ ಅಂಜದಿರಿ. ದಿನದಂತ್ಯಕ್ಕೆ ನಿಮಗೆ ಉತ್ತಮ ಪ್ರತಿಫಲ ಸಿಕ್ಕೀಸಿಗುವುದು.

ಮಿಥುನ
ನಿಮ್ಮ ಕಾರ್ಯದಲ್ಲಿ ಏರುಪೇರು ಅನುಭವಿಸುವಿರಿ. ಆದರೆ ಅಂತಿಮವಾಗಿ ಎಲ್ಲವೂ ಸುಸೂತ್ರವಾಗುವುದು. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿಹೆಚ್ಚಲಿದೆ.

ಕಟಕ
ಆತ್ಮೀಯರ ಜತೆ ಸಂಬಂಧ ಹಳಸಿದ್ದರೆ ಅದನ್ನು ಸರಿಪಡಿಸಲು ನೀವೇ ಮೊದಲ ಹೆಜ್ಜೆ ಇಡಿ. ಅದರಿಂದ ಎಲ್ಲವೂ ಒಳಿತಾಗುವುದು. ಆರ್ಥಿಕ ಕೊರತೆ.

ಸಿಂಹ
ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳಲು ಇಂದು ಸಕಾಲವಲ್ಲ. ವಿವಾಹಿತರಿಗೆ ಸಂತೋಷದ ಸುದ್ದಿ ಕೇಳಿಬಂದೀತು.

ಕನ್ಯಾ
ಇಂದು ಒತ್ತಡದ ದಿನ. ಕೆಲವಾರು ಕಾರ್ಯ ಮುಗಿಸಬೇಕಾದ ಒತ್ತಡ. ದೈಹಿಕ ಅನಾರೋಗ್ಯ, ಮೈ ನೋವು ಬಾಧಿಸಬಹುದು. ಆರ್ಥಿಕ ಬಿಕ್ಕಟ್ಟು.

ತುಲಾ
ನಿಮ್ಮ ಕೆಲಸದ ಫಲವನ್ನು ಸರಿಯಾಗಿ ಪರಿಶೀಲನೆ ನಡೆಸಿ. ತಪ್ಪುಗಳು ಉಳಿಯದಂತೆ ನೋಡಿಕೊಳ್ಳಿ. ನಿಮ್ಮಲ್ಲಿ ಹುಳುಕು ಹಿಡಿಯಲು ಕೆಲವರು ಕಾದಿರುತ್ತಾರೆ.

ವೃಶ್ಚಿಕ
ನಿಮ್ಮ ಕಾರ್ಯವು ಇತರರನ್ನು ಪ್ರೇರೇಪಿಸುವುದು. ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚು ಭಾಗಿಯಾಗುವಿರಿ. ಕೌಟುಂಬಿಕ ಸಮಾಧಾನ.

ಧನು
ಸಂಗಾತಿಯ ಜತೆ ಭಾವನಾತ್ಮಕ  ಸಮನ್ವಯ ಸಾಧಿಸುವಿರಿ. ಮನೆಯಲ್ಲಿನ ಪರಿಸರ ಹೆಚ್ಚು ಸೌಹಾರ್ದದಾಯಕ. ಆರ್ಥಿಕ ಸುಧಾರಣೆ.

ಮಕರ
ಹತ್ತಿರದ ಬಂಧುಗಳ ಭೇಟಿ  ಸಂಭವ. ಖಾಸಗಿ ಬದುಕಿನಲ್ಲಿ ನಿಮಗೆ  ಪೂರಕವಾದ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಒತ್ತಡ ನಿವಾರಣೆ, ಧನಲಾಭ.

ಕುಂಭ
ನಿಮ್ಮ ಗುಣಾತ್ಮಕ ಮನೋಭಾವವು ಸಮಸ್ಯೆ ಪರಿಹಾರಕ್ಕೆ ನೆರವಾಗುವುದು. ಆಪ್ತರಿಂದ ಸೂಕ್ತ ನೆರವು , ಬೆಂಬಲ ಪಡೆಯುವಿರಿ.

ಮೀನ
ನಿರಾಳ ದಿನ. ಮನರಂಜನಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಬಂಧು ಗಳಿಂದ ಪೂರಕ ಸುದ್ದಿ ಕೇಳಿಬಂದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!