ಪೊರ್ನ್‌ ಕೋರ್ಸ್‌ ಆರಂಭಿಸಲು ಮುಂದಾದ ಅಮೆರಿಕ ಕಾಲೇಜು; ಜನರ ʼಗೊಂದಲʼ ನಿವಾರಿಸುವುದು ಗುರಿಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಪಶ್ಚಿಮದ ರಾಷ್ಟ್ರಗಳಲ್ಲಿ ಲೈಂಗಿಕತೆ ವಿಚಾರದಲ್ಲಿ ಮುಚ್ಚುಮರೆಗಳು ಕಮ್ಮಿ. ಅಲ್ಲಿನ ಜನರು ಸಹ ಲೈಂಗಿಕತೆ ವಿಚಾರದಲ್ಲಿ ತೀರಾ ಮಡಿವಂತಿಕೆಗಳನ್ನು ಪಾಲಿಸುವವರಲ್ಲ.
ಈ ನಿಟ್ಟಿನಲ್ಲಿ ಅಮೆರಿಕದ ಶಿಕ್ಷಣ ಸಂಸ್ಥೆಯೊಂದು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲಿಯೇ ಸೆಕ್ಸ್‌ ಕುರಿತಾದ ಸಂಪೂರ್ಣ ಅರಿವು ಮೂಡಿಸಲು ‘ನೀಲಿ ಚಿತ್ರ (ಪೋರ್ನೊಗ್ರಫಿ) ಕೋರ್ಸ್‌ ಆರಂಭಿಸಲು ಸಿದ್ಧತೆಗಳನ್ನು ನಡೆಸಿದೆ.
ಅಮೆರಿಕದ ಉಠಾ ನಗರದಲ್ಲಿರುವ ವೆಸ್ಟ್‌- ಮಿನ್‌ಸ್ಟರ್‌ ಕಾಲೇಜು ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ. ಈ ವರ್ಷದ ಶೈಕ್ಷಣಿಕ ಸಾಲಿನಿಂದಲೇ ಮೊಟ್ಟಮೊದಲ ಬಾರಿಗೆ ಈ ಕೋರ್ಸ್‌ ಆರಂಬಿಸಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಟ್ಟಿಗೆ ಕುಳಿತು ನೀಲಿ ಚಿತ್ರಗಳನ್ನು ವೀಕ್ಷಿಸುತ್ತಾರೆ. ಶಿಕ್ಷಕರು ಲೈಂಗಿಕ ಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಹೇಳಿಕೊಡುತ್ತಾರೆ. ಸಮಾಜ, ಸಂಪ್ರದಾಯದ ನಿಯಮಗಳ ಪ್ರಕಾರ ಜನರಲ್ಲಿ ಲೈಂಗಿಕತೆಯ ಕುರಿತಾಗಿ ಕೆಲವೊಂದು ಗೊಂದಲಗಳಿವೆ. ಅವುಗಳನ್ನು ಸರಿಪಡಿಸುವುದು ನಮ್ಮ ಉದ್ದೇಶ ಎಂದು ಕಾಲೇಜಿನ ಮುಖ್ಯಸ್ಥರು ಹೇಳುತ್ತಾರೆ.
ಆದರೆ ಈ ಕೋರ್ಸ್‌ ಆರಂಭಕ್ಕೆ ಸಂಪ್ರದಾಯವಾದಿ ಅಮೆರಿಕನ್ನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಗುರು ದೇವರ ಸಮಾನ. ಅಂತಹ ಶಿಕ್ಷಕನೊಂದಿಗೆ ಕುಳಿತು ನೀಲಿಚಿತ್ರಗಳನ್ನು ವೀಕ್ಷಿಸುವುದೆಂದರೆ ಸಮಾಜ ಅಧಃಪತನದತ್ತ ಸಾಗಿದಂತೆ ಎಂದು ಸಂಪ್ರದಾಯವಾದಿಗಳು ಕಿಡಿಕಾರಿದ್ದಾರೆ. ಭಾರೀ ವಿರೋಧಧ ಹಿನ್ನೆಲೆಯಲ್ಲಿ ಕಾಲೇಜು ಈ ಕೋರ್ಸ್‌ ಆರಂಭಿಸುವುದು ಅನುಮಾನ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!