ಡಿಯರ್‌ ಬ್ರದರ್‌ ಎಂದು ಯಶ್, ಪ್ರಶಾಂತ್‌ ನೀಲ್‌ ಬಗ್ಗೆ ರಾಮ್‌ಚರಣ್‌ ಸ್ಪೆಷಲ್‌ ಟ್ವೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಾದ್ಯಂತ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್-‌2 ಸಿನಿಮಾ ಅಬ್ಬರಿಸುತ್ತಿದೆ. ಸಿನಿ ಸೆಲೆಬ್ರೆಟಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಾಲಿವುಡ್‌ ಹೀರೋಗಳಂತೂ ಡೈರೆಕ್ಟರ್‌ ಹಾಗೂ ಹೀರೋ ಕುರಿತು ಸ್ಪೆಷಲ್‌ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಮೊನ್ನೆಯಷ್ಟೇ ಅಲ್ಲು ಅರ್ಜುನ್‌ ಸಿನಿಮಾ ಕುರಿತು ಮಾತನಾಡಿದ್ರು. ಇದೀಗ ಮೆಗಾಪವರ್‌ ಸ್ಟಾರ್‌ ರಾಮ್‌ ಚರಣ್‌ ಸಿನಿಮಾ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಟ್ವೀಟ್‌ ಮೂಲಕ ʻನನ್ನ ಸಹೋದರ ಪ್ರಶಾಂತ್ ನೀಲ್ ಮತ್ತು ಚಿತ್ರ ನಿರ್ಮಾಪಕರಾದ ಹೊಂಬಾಳೆ ಫಿಲಂಸ್‌ಗೆ ಅಭಿನಂದನೆಗಳು. ರಾಕಿ..ಡಿಯರ್‌ ಬ್ರದರ್ ನಿಮ್ಮ ಅಭಿನಯ ಮೈಂಡ್ ಬ್ಲೋಯಿಂಗ್. ಪರದೆಯ ಮೇಲೆ ನಿಮ್ಮ ನಟನೆ ಅದ್ಭುತವಾಗಿದೆʼ ಎಂದಿದ್ದಾರೆ. ಕೆಜಿಎಫ್ 2 ಕುರಿತು ಚರಣ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ RRR ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೆಸರು ಮಾಡಿದ್ದ ಚರಣ್‌ಗೆ ಫ್ಯಾನ್ ಫಾಲೋಯಿಂಗ್ ಕೂಡ ಗಣನೀಯವಾಗಿ ಹೆಚ್ಚಿದೆ. ಇದೀಗ ‘ಕೆಜಿಎಫ್ 2’ ಸಿನಿಮಾದ ಬಗ್ಗೆ ಚರಣ್ ಟ್ವೀಟ್ ಮಾಡಿದ್ದು, ಕನ್ನಡ ಪ್ರೇಕ್ಷಕರು ಹಾಗೂ ಯಶ್ ಅಭಿಮಾನಿಗಳು ಕೂಡ ಈ ಟ್ವೀಟ್ ಶೇರ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!