July 11, 2026
Saturday, July 11, 2026
spot_img

60ರ ಹರೆಯದಲ್ಲೂ ಸಾಹಸ: ಶಾಸಕ ಎಸ್. ಸುರೇಶ್ ಕುಮಾರ್ ತಂಡದಿಂದ ಸೈಕಲ್‌ನಲ್ಲೇ ತಿರುಪತಿ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಕೀಯ ನಾಯಕರು ಸಾಮಾನ್ಯವಾಗಿ ಕಾರು ಅಥವಾ ವಿಮಾನಗಳ ಮೂಲಕ ದೂರದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ, ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು ತಮ್ಮ ತಂಡದೊಂದಿಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ತಿರುಪತಿಗೆ ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿ ಎಲ್ಲರ ಹುಬ್ಬೇರಿಸಿದ್ದಾರೆ.‌

ಬೆಂಗಳೂರಿನಿಂದ ತಿರುಪತಿ ವೆಂಕಟರಮಣ ಸ್ವಾಮಿ ಸನ್ನಿಧಿವರೆಗಿನ ಒಟ್ಟು 265ಕಿಲೋಮೀಟರ್ ದೂರದ ಹಾದಿಯನ್ನು ಶಾಸಕರು ಮತ್ತು ಅವರ ಸೈಕ್ಲಿಂಗ್ ತಂಡ ಕೇವಲ 14 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದಾರೆ.

ಫಿಟ್‌ನೆಸ್ ಹಾಗೂ ಪರಿಸರ ಜಾಗೃತಿಯ ಸಂದೇಶ

ತಮ್ಮ 60ರ ಹರೆಯದಲ್ಲೂ ಯುವಕರಿಗೂ ಮಾದರಿಯಾಗುವಂತೆ ಸೈಕಲ್ ತುಳಿದಿರುವ ಸುರೇಶ್ ಕುಮಾರ್ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಬೆಂಗಳೂರಿನಿಂದ ಹೊರಟ ಈ ಸೈಕ್ಲಿಂಗ್ ತಂಡವು ಹೆದ್ದಾರಿಯ ಕಠಿಣ ಹಾದಿ, ಏರಿಳಿತಗಳನ್ನು ಯಶಸ್ವಿಯಾಗಿ ದಾಟಿ ನಿಗದಿತ ಅವಧಿಗಿಂತ ಮುನ್ನವೇ ತಿರುಪತಿ ಬೆಟ್ಟದ ತಪ್ಪಲನ್ನು ತಲುಪಿದೆ.

ಇದನ್ನೂ ಓದಿ:

ವೆಂಕಟೇಶ್ವರನ ದರುಶನ ಪಡೆದ ತಂಡ

ತಿರುಪತಿ ತಲುಪಿದ ನಂತರ ಶಾಸಕ ಸುರೇಶ್ ಕುಮಾರ್ ಮತ್ತು ಅವರ ಸಹಚರರು ತಿರುಮಲ ಬೆಟ್ಟವನ್ನು ಏರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರುಶನ ಪಡೆದರು. ಕಠಿಣ ಸೈಕಲ್ ಪ್ರಯಾಣದ ಬಳಿಕ ದೇವರ ದರುಶನ ಪಡೆದಿದ್ದಾರೆ. ಶಾಸಕರ ಈ ಸಾಹಸಮಯ ಧಾರ್ಮಿಕ ಯಾತ್ರೆಯ ಫೋಟೋಗಳು ಮತ್ತು ವಿವರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !