ಹ್ಯುರಾನ್ ಸರೋವರದ ಮೇಲೆ ಮತ್ತೊಂದು ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಿಚಿಗನ್ ರಾಜ್ಯದ ಹ್ಯುರಾನ್ ಸರೋವರದ ಮೇಲೆ ಅಮೆರಿಕ ವಾಯುಪ್ರದೇಶದಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಅಪರಿಚಿತ ವಸ್ತುವನ್ನು ಅಮೆರಿಕ ಸೇನೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ.

ಅಧ್ಯಕ್ಷ ಜೋ ಬೈಡನ್ ಅವರ ನಿರ್ದೇಶನದ ಮೇರೆಗೆ ಎಫ್-16 ಫೈಟರ್ ಜೆಟ್, AIM9x ಕ್ಷಿಪಣಿಯನ್ನು ಹಾರಿಸುವ ಮೂಲಕ ಈ ಕಾರ್ಯಾಚರಣೆ ನಡೆಸಿದೆ ಎಂದು ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ ರೈಡರ್ ಹೇಳಿದ್ದಾರೆ.

ಕಳೆದ ಶನಿವಾರ ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಹೊಡೆದುರುಳಿಸಿದ ಚೀನಾದ ಕಣ್ಗಾವಲು ಬಲೂನ್ ಸೇರಿ ನಾಲ್ಕನೇ ವಸ್ತು ಇದಾಗಿದೆ. ಎರಡನ್ನು ಶುಕ್ರವಾರ ಅಲಾಸ್ಕಾದಲ್ಲಿ ಮತ್ತು ಶನಿವಾರ ಕೆನಡಾದ ವಾಯುಪ್ರದೇಶದಲ್ಲಿ ಒಂದನ್ನು ಫೈಟರ್‌ ಜೆಟ್‌ಗಳನ್ನು ಬಳಸಿ ಹೊಡೆದುರುಳಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!