ಅಫ್ಘನ್‌ನ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನಿಷೇಧ: ವಿವಿ ಒಳಬರದಂತೆ ಗನ್‌ ಹಿಡಿದು ಕಾಯುತ್ತಿದ್ದಾರೆ ತಾಲೀಬಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಾನವ ಹಕ್ಕುಗಳ ಮೇಲಿನ ಮತ್ತೊಂದು ದಾಳಿಯಲ್ಲಿ ಅಘ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಸ್ತ್ರೀಯರಿಗೆ ಉನ್ನತ ಶಿಕ್ಷಣವನ್ನು ನಿಷೇಧಿಸಿದ್ದಾರೆ. ಅದಾಗಿ ಒಂದು ದಿನದ ನಂತರ ನೂರಾರು ಹತಾಶ ಯುವತಿರು ವಿವಿ ಬಳಿ ಬಂದಿದ್ದಾರೆ. ಆದರೆ ಅವರು ಅಫ್ಘಾನ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಿಗೆ ಪ್ರವೇಶಿಸದಂತೆ ಶಸ್ತ್ರಸಜ್ಜಿತ ಕಾವಲುಗಾರರು ಗನ್‌ ಹಿಡಿದು ತಡೆಯುತ್ತಿದ್ದಾರೆ.
ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ತಾಲಿಬಾನಿಗಳು ಮೃದುವಾದ ಆಡಳಿತದ ಭರವಸೆ ನೀಡಿದ್ದರು. ಆದರೆ ಅದೀಗ ಸುಳ್ಳಾಗಿದೆ. ಕಠಿಣ ಇಸ್ಲಾಮಿಸ್ಟ್‌ಗಳು ಅಂತರರಾಷ್ಟ್ರೀಯ ಆಕ್ರೋಶವನ್ನು ನಿರ್ಲಕ್ಷಿಸಿ ಮಹಿಳೆಯರ ಜೀವನದ ಎಲ್ಲಾ ಅಂಶಗಳ ಮೇಲೆ ನಿರ್ಬಂಧಗಳನ್ನು ಹೆಚ್ಚಿಸಿದ್ದಾರೆ.
ರಾಜಧಾನಿ ಕಾಬೂಲ್‌ನಲ್ಲಿರುವ ವಿಶ್ವವಿದ್ಯಾನಿಲಯಗಳ ಹೊರಗೆ ಜಮಾಯಿಸಿದ ವಿದ್ಯಾರ್ಥಿನಿಯರ ಗುಂಪುಗಳನ್ನು ಶಸ್ತ್ರಸಜ್ಜಿತ ಕಾವಲುಗಾರರು ಕಾಯುತ್ತಿರುವುದು ಮತ್ತು ಮುಚ್ಚಿದ ಗೇಟ್‌ಗಳನ್ನು ದಾಟಿ ಪ್ರವೇಶಿಸುವುದನ್ನು ನಿರ್ಬಂಧಿಸಿರುವುದನ್ನು ಕಾಣಬಹುದು.
ಹಿಜಾಬ್‌ ಧರಿಸಿದ ಅನೇಕ ಯುವತಿಯರು ಕ್ಯಾಂಪಸ್‌ಗಳಿಗೆ ಹೋಗುವ ರಸ್ತೆಗಳಲ್ಲಿ ಗುಂಪುಗಳಾಗಿ ನಿಂತಿರುವುದು ಕಂಡುಬಂದಿದೆ. “ನಾವು ಅವನತಿ ಹೊಂದಿದ್ದೇವೆ. ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ” ಎಂದು ಒಬ್ಬ ವಿದ್ಯಾರ್ಥಿನಿ ಬಿಕ್ಕಳಿಸಿದ್ದಾಳೆ. ಇತ್ತೀಚಿನ ಸುಗ್ರೀವಾಜ್ಞೆಗೆ ಪುರುಷ ವಿದ್ಯಾರ್ಥಿಗಳು ಸಹ ಆಘಾತ ವ್ಯಕ್ತಪಡಿಸಿದ್ದಾರೆ.
“ಇದು ನಿಜವಾಗಿಯೂ ತಾಲೀಬಾನಿಗಳ ಅನಕ್ಷರತೆ ಮತ್ತು ಇಸ್ಲಾಂ ಮತ್ತು ಮಾನವ ಹಕ್ಕುಗಳ ಬಗ್ಗೆ ಅವರಿಗಿರುವ ಕಡಿಮೆ ಜ್ಞಾನವನ್ನು ವ್ಯಕ್ತಪಡಿಸುತ್ತದೆ” ಎಂದು ಮತ್ತೊಬ್ಬ ವಿದ್ಯಾರ್ಥಿನಿ ಹೇಳಿದ್ದಾಳೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭವಿಷ್ಯ ಇನ್ನಷ್ಟು ಹದಗೆಡಲಿದೆ. ಎಲ್ಲರೂ ಭಯಭೀತರಾಗಿದ್ದಾರೆ ಎನ್ನು ತ್ತಾರೆ ವಿದ್ಯಾರ್ಥಿಗಳು.
ವಿಶ್ವವಿದ್ಯಾನಿಲಯಗಳಿಂದ ಮಹಿಳೆಯರನ್ನು ನಿಷೇಧಿಸುವ ನಿರ್ಧಾರವನ್ನು ಮಂಗಳವಾರ ತಡರಾತ್ರಿ ಉನ್ನತ ಶಿಕ್ಷಣ ಸಚಿವ ನೇಡಾ ಮೊಹಮ್ಮದ್ ನದೀಮ್ ಪ್ರಕಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!