Saturday, February 4, 2023

Latest Posts

ಕಿಂಗ್ ಚಾರ್ಲ್ಸ್‌ ಮೇಲೆ ಮೊಟ್ಟೆ ಎಸೆದ ಇಂಗ್ಲೆಂಡ್ ವಿದ್ಯಾರ್ಥಿಗೆ 6 ತಿಂಗಳು ಜೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್‌ 
ಇಂಗ್ಲೆಂಡ್ ಕಿಂಗ್ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಅವರ ಮೇಲೆ ಮೊಟ್ಟೆಗಳನ್ನು ತೂರಿದ್ದ 23 ವರ್ಷದ ವಿದ್ಯಾರ್ಥಿಗೆ 6 ತಿಂಗಳು ಶಿಕ್ಷೆ ವಿಧಿಸಲಾಗಿದೆ.
ನವೆಂಬರ್‌ನಲ್ಲಿ ಉತ್ತರ ಇಂಗ್ಲೆಂಡ್‌ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ರಾಜ ಮತ್ತು ರಾಣಿ ಮೇಲೆ ಮೊಟ್ಟೆ ತೂರಾಟ ನಡೆದಿತ್ತು. ಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ಯಾಟ್ರಿಕ್ ಥೆಲ್ವೆಲ್ ಈ ಕೃತ್ಯ ನಡೆಸಿದ್ದ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ವೀಡಿಯೊದಲ್ಲಿ ಬ್ರಿಟಿಷ್ ದೊರೆ ಮತ್ತು ರಾಣಿಯ ಹಿಂದೆ ನಾಲ್ಕು ಮೊಟ್ಟೆಗಳು ಹಾರಿಬಂದಿದ್ದನ್ನು ತೋರಿಸಿತ್ತು. ಆದರೆ ದಂಪತಿ ಈ ಘಟನೆಯಿಂದ ವಿತಲಿತರಾಗದೆ ಕಾರ್ಯಕ್ರಮದಲ್ಲಿ ಮುಂದುವರೆದಿದ್ದರು.
ಕಿಂಗ್ ಚಾರ್ಲ್ಸ್‌ನ ಭದ್ರತಾ ತಂಡವು ಲುಟನ್ ಟೌನ್ ಹಾಲ್‌ನ ಹೊರಗಿನ ಜನಸಂದಣಿಯಿಂದ ಯುವಕನನ್ನು ಹೊರಗೆಳೆದು ಬಂಧಿಸಿತ್ತು. ವಿದ್ಯಾರ್ಥಿ ಪ್ಯಾಟ್ರಿಕ್ ಥೆಲ್ವೆಲ್ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ 6 ತಿಂಗಳ ಜೈಲುವಾಸ ವಿಧಿಸಲಾಗಿದೆ.
ರಾಜಮನೆತನದ ವಿರುದ್ಧ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ್ದು ಇದೇ ಮೊದಲಲ್ಲ. 2002 ರಲ್ಲಿ ರಾಣಿ ಎಲಿಜಬೆತ್ II ನಾಟಿಂಗ್‌ ಹ್ಯಾಮ್‌ ಗೆ ಭೇಟಿ ನೀಡಿದ್ದಾಗ ಆಕೆಯ ರಾಜಮನೆತನದ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿತ್ತು. 1995 ರಲ್ಲಿ, ಮಧ್ಯ ಡಬ್ಲಿನ್‌ನಲ್ಲಿ ವಾಕ್‌ಬೌಟ್‌ನಲ್ಲಿದ್ದಾಗ ಬ್ರಿಟಿಷ್ ವಿರೋಧಿ ಪ್ರತಿಭಟನಾಕಾರರು ಈಗಿನ ಕಿಂಗ್‌ ಚಾರ್ಲ್ಸ್‌ ಮೇಲೆ ಮೊಟ್ಟೆಗಳನ್ನು ಎಸೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!