ಆಫ್ರಿಕನ್ ಒಕ್ಕೂಟ ಸೇರ್ಪಡೆ: ಇನ್ಮುಂದೆ ಜಿ20 ಅಲ್ಲ, ಜಿ21!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಜಿ20ಶೃಂಗಸಭೆ ಐತಿಹಾಸಿಕವಾಗಿರಲಿದೆ, ಸಭೆ ಮುಕ್ತಾಯದ ವೇಳೆಗೆ ಆಫ್ರಿಕನ್ ಯೂನಿಯನ್ ಹೊಸ ಸದಸ್ಯತ್ವದೊಂದಿಗೆ ಜಿ21 ಆಗಿ ಹೊರಹೊಮ್ಮಲಿದೆ.

ಹೌದು, ಆಫ್ರಿಕನ್ ಯೂನಿಯನ್‌ನ್ನು ಜಿ20 ಸೇರ್ಪಡೆಗೆ ಭಾರತ ಪ್ರಸ್ತಾಪ ಮಾಡಿದೆ. ದೊಡ್ಡ ಆರ್ಥಿಕತೆಯ ಕೂಟದಲ್ಲಿ ಆಫ್ರಿಕನ್ ಯೂನಿಯನ್‌ನ್ನು ಪೂರ್ಣ ಸದಸ್ಯರನ್ನಾಗಿ ಸೇರಿಸುವುದಕ್ಕೆ ಭಾರತದ ಬೆಂಬಲ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಎಲ್ಲಾ ಧ್ವನಿಗಳನ್ನು ಗುರುತಿಸಬೇಕು, ಸಂಪೂರ್ಣವಾಗಿ ಉಪಯುಕ್ತವಾಗುವ ವಿಶ್ವ ದೃಷ್ಟಿಕೋನದಿಂದ ಹೊರಬರುವ ಅಗತ್ಯ ಇದೆ, ಸರ್ವಜನ ಹಿತಾಯ, ಸರ್ವಜನ ಸುಖಾಯ ಮಾದರಿಯನ್ನು ಅಳವಿಡಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಆಫ್ರಿಕನ್ ಯುನಿಯನ್ ಒಟ್ಟಾರೆ 55 ದೇಶಗಳನ್ನು ಹೊಂದಿದೆ, ಆಫ್ರಿಕಾ ದೊಡ್ಡ ಖಂಡವಾಗಿದೆ. ಅಲ್ಲಿಯ ಆರ್ಥಿಕತೆ, ಸಮುದಾಯ ವೈವಿಧ್ಯಮಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!