60 ಲಕ್ಷ ಮೌಲ್ಯದ ಗಾಂಜಾ ಇಲಿಗಳ ಪಾಲಾಯ್ತಾ?:ಪ್ರಶ್ನಾರ್ಥಕವಾದ ಪೊಲೀಸರ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರೋಪಿಗಳಿಂದ ವಶಪಡಿಸಿಕೊಂಡ ಮದ್ಯವನ್ನು ಸ್ಟೋರ್ ರೂಂನಲ್ಲಿದ್ದ ಇಲಿಗಳು ಕುಡಿದಿವೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಪೊಲೀಸರು ಈ ಹಿಂದೆ ಸುದ್ದಿ ಮಾಡಿದ್ದರು. ಇದೀಗ ಮತ್ತೊಮ್ಮೆ ಅಂಥದ್ದೊಂದು ಉತ್ತರ ನೀಡಿ ಶಾಕ್ ಕೊಟ್ಟಿದ್ದಾರೆ. ಆರೋಪಿಗಳಿಂದ ಸುಮಾರು 581 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಪೊಲೀಸರು ಮಥುರಾ ಜಿಲ್ಲೆಯ ಹೆದ್ದಾರಿ ಮತ್ತು ಶೇರ್ಗಢ ಪೊಲೀಸ್ ಠಾಣೆಗಳ ಗೋದಾಮುಗಳಲ್ಲಿ ಇರಿಸಿದ್ದಾರೆ.

ಗಾಂಜಾವನ್ನು ತಮ್ಮ ಮುಂದೆ ಹಾಜರುಪಡಿಸುವಂತೆ ಮಥುರಾ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಈ ಸಂದರ್ಭದಲ್ಲಿ ಎಲ್ಲಾ ಗಾಂಜಾವನ್ನು ಇಲಿಗಳು ತಿಂದು ಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಎಲ್ಲಾ ಇಲಿಗಳು ಗಾಂಜಾ ನಾಶ ಮಾಡಿ ತಿಂದು ಹಾಕಿವೆ ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ಆ ಗಾಂಜಾ ಮೌಲ್ಯ ಸರಿ ಸುಮಾರು 60 ಲಕ್ಷ ರೂ.

ಇಲಿಗಳು ಸೇರಿ ಗಾಂಜಾವನ್ನು ನಾಶಪಡಿಸಿವೆ ಎಂದು ಪೊಲೀಸರ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಇಲಿಗಳು ಗಾಂಜಾ ನಾಶಪಡಿಸಿರುವ ಬಗ್ಗೆ ಇದೇ 26ರೊಳಗೆ ಸಾಕ್ಷ್ಯ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮದ್ಯ ಮತ್ತು ಗಾಂಜಾ ಕುರಿತು ನ್ಯಾಯಾಲಯಕ್ಕೆ ಉತ್ತರ ಪ್ರದೇಶ ಪೊಲೀಸರು ನೀಡಿದ ಉತ್ತರಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!