Friday, December 9, 2022

Latest Posts

ಕಂಠಪೂರ್ತಿ ಮದ್ಯ ಸೇವಿಸಿದ ಪ್ರಾಂಶುಪಾಲ: ಗೊರಕೆ ಹೊಡೆಯುತ್ತಾ ಶಾಲೆಯಲ್ಲೇ ನಿದ್ದೆಗೆ ಜಾರಿದ ವಿಡಿಯೋ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯದು ಕೆಟ್ಟದ್ದನ್ನು ಹೇಳಬೇಕಾದ ಪ್ರಾಂಶುಪಾಲರೇ ದಾರಿ ತಪ್ಪಿ ಶಾಲಾ ತರಗತಿ ಕೊಠಡಿಯಲ್ಲಿ ಕಂಠಪೂರ್ತಿ ಕುಡಿದು ಅರೆನಗ್ನರಾಗಿ ಮಲಗಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಕ್ಕಳಿಗೆ ಪಠ್ಯವಷ್ಟೇ ಅಲ್ಲ, ಮಕ್ಕಳಿಗೆ ಸರಿಯಾ ಕ್ರಮಶಿಕ್ಷಣದ ಪಾಠ ಮಾಡಬೇಕಾದ ಪ್ರಾಂಶುಪಾಲರು ದಾರಿ ತಪ್ಪಿ ಟ್ರೋಲ್‌ ಆಗುತ್ತಿದ್ದಾರೆ.

ಮಹಾರಾಷ್ಟ್ರದ ಅಮರಾವತಿ ಪ್ರದೇಶದ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ತರಗತಿ ಕೊಠಡಿ ಮದ್ಯ ಸೇವಿಸಿ..ಶರ್ಟ್ ಕೂಡ ಹಾಕದೆ ಮಲಗಿದ್ದಕ್ಕೆ ಜನ ಸಿಟ್ಟಿಗೆದ್ದಿದ್ದಾರೆ. ಅಂಥವರನ್ನು ಕಂಡರೆ ಮಕ್ಕಳೂ ಹಾಗೆಯೇ ಆಗುತ್ತಾರೆ ಎಂಬ ಆತಂಕ ಹೊರಹಾಕಿದ್ದಾರೆ. ಶಾಲಾ ವಿದ್ಯಾರ್ಥಿಗಳು ಘಟನೆಯ ವಿಡಿಯೋ ತೆಗೆದ ಬಳಿಕ ಇದು ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಂಶುಪಾಲರ ವಿರುದ್ಧ ಟೀಕೆಗಳು ಬರುತ್ತಿವೆ. ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!