October 9, 2026
Friday, October 9, 2026
spot_img

ರಾಮಾಯಣ ಸಿನಿಮಾದ ನಂತರ ಬ್ರಹ್ಮಾಸ್ತ್ರ 2 ಶೂಟಿಂಗ್‌ ಮಾಡಲಿದ್ದಾರೆ ರಣ್‌ಬೀರ್‌! ದೀಪಿಕಾ ಪಡುಕೋಣೆ ಸಾಥ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಣ್‌ಬೀರ್‌ ಕಪೂರ್‌ ಸದ್ಯ ನಿತೇಶ್‌ ತಿವಾರಿಯ ರಾಮಾಯಣ ಸಿನಿಮಾದ ಮೂಲಕ ಜನರನ್ನು ರಂಜಿಸಲು ಆಗಮಿಸುತ್ತಿದ್ದಾರೆ. ಈ ಸಿನಿಮಾ ಎರಡು ಪಾರ್ಟ್‌ನಲ್ಲಿ ತೆರೆ ಮೇಲೆ ಬರಲಿದೆ. ಎರಡೂ ಪಾರ್ಟ್‌ ಶೂಟಿಂಗ್‌ ನಂತರ ರಣ್‌ಬೀರ್‌ ಬ್ರಹ್ಮಾಸ್ತ್ರ 2 ಶೂಟಿಂಗ್‌ ಆರಂಭಿಸಲಿದ್ದಾರಂತೆ!

ಹೌದು, ನಟಿ ಆಲಿಯಾ ಭಟ್‌ ಹಾಗೂ ರಣ್‌ಬೀರ್‌ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಗ್‌ ಹಿಟ್‌ ಆಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡಿದ ಸಿನಿಮಾ ಸೀಕ್ವೆಲ್‌ ಯಾವಾಗ ಬರುತ್ತದೆ ಎಂದು ಜನ ಕಾದು ಕುಳಿತಿದ್ದರು. ಇದೀಗ ಸಿನಿಮಾ ಶೂಟಿಂಗ್‌ ಬಗ್ಗೆಯಷ್ಟೇ ಅಪ್ಡೇಟ್‌ ಸಿಕ್ಕಿದೆ.

ಸೀಕ್ವೆಲ್‌ನಲ್ಲಿ ರಣ್‌ಬೀರ್‌ ದೇವ್‌ ಹಾಗೂ ಶಿವ ಎನ್ನುವ ಎರಡೂ ಪಾತ್ರವನ್ನು ನಿಭಾಯಿಸಲಿದ್ದಾರೆ. ಇತ್ತ ಆಲಿಯಾ ಭಟ್‌ ಈಶಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅಯಾನ್‌ ಮುಖರ್ಜಿ ಸಿನಿಮಾ ಬಗ್ಗೆ ನಟಿ ದೀಪಿಕಾ ಪಡುಕೋಣೆ ಬಳಿ ಮಾತನಾಡಿದ್ದು, ಸಿನಿಮಾದಲ್ಲಿ ಪವರ್‌ಫುಲ್‌ ಕ್ಯಾರೆಕ್ಟರ್‌ ಆದ ಅಮೃತಾ ಪಾತ್ರವನ್ನು ನಿಭಾಯಿಸುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಅಗತ್ಯವಿದೆ. ಆಕ್ಷನ್‌ ಸೀಕ್ವೆನ್ಸ್‌ಗಳನ್ನು ಕೂಡ ಮಾಡಬೇಕಾಗುತ್ತದೆ. ಈ ಪಾತ್ರಕ್ಕೆ ದೀಪಿಕಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬ್ರಹ್ಮಾಸ್ತ್ರ 2 ದಿ ಆಸ್ಟ್ರಾವರ್ಸ್‌ ಸಿನಿಮಾವನ್ನು ಭಾರತೀಯ ಪುರಾಣಗಳನ್ನು ಆಧರಿಸಿ ಮಾಡಲಾಗುತ್ತಿದೆ. ಈ ಜಾನರ್‌ನ ಸಿನಿಮಾಗಳನ್ನು ಜನ ಇಷ್ಟಪಡುತ್ತಿದ್ದು, ಸೂಕ್ತ ಸಮಯಕ್ಕೆ ಫಿಲಂ ಬಿಡುಗಡೆ ಮಾಡುತ್ತೇವೆ ಎಂದು ಅಯಾನ್‌ ಮುಖರ್ಜಿ ಹೇಳಿದ್ದಾರೆ.

Must Read