Monday, December 11, 2023

Latest Posts

ಶ್ರದ್ಧಾ ಹತ್ಯೆ ಬೆನ್ನಲ್ಲೇ ಮತ್ತೊಂದು ರಹಸ್ಯ ಬಯಲಿಗೆ: ತಂದೆಯನ್ನೇ ಕೊಲೆ ಮಾಡಿ ದೇಹದ ಭಾಗಗಳನ್ನು ಕತ್ತರಿಸಿ ಎಸೆದ ಮಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರದ್ಧಾ ಭೀಕರ ಹತ್ಯೆ ಬೆಳಕಿಗೆ ಬಂದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ವ್ಯಕ್ತಿಯೊಬ್ಬ ಭಾರತೀಯ ನೌಕಾಪಡೆಯ ನಿವೃತ್ತ ಸಿಬ್ಬಂದಿಯಾಗಿದ್ದ ತನ್ನ ತಂದೆಯನ್ನು ಕೊಲೆ ಮಾಡಿಕತ್ತರಿಸಿ ಎಸೆದ ಘಟನೆ ನಡೆದಿದೆ.
ಬರೂಯಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸ್ ಮಲ್ಲಿಕ್ ನಿವಾಸಿ ಜಾಯ್ , ನವೆಂಬರ್ 13 ರಂದು ಹಣದ ವಿವಾದದ ಬಗ್ಗೆ ತೀವ್ರ ಜಗಳದ ನಂತರ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಬಳಿಕ ತಾಯಿಯ ಸಹಾಯದಿಂದ ಮೃತದೇಹವನ್ನು ಕತ್ತರಿಸಿ ಕೊಳಗಳು ಮತ್ತು ಪೊದೆಗಳಲ್ಲಿ ಎಸೆಯಲಾಯಿತು. ಬಳಿಕ ಪೊಲೀಸರನ್ನು ದಾರಿ ತಪ್ಪಿಸಲು ಇಬ್ಬರೂ ನಾಪತ್ತೆ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ವ್ಯಕ್ತಿಯ ಛಿದ್ರಗೊಂಡ ಮುಂಡವು ಬರೂಯಿಪುರದ ಹರಿಹರಪುರ ಸಮೀಪದ ಕೊಳದಲ್ಲಿ ತೇಲುತ್ತಿರುವುದು ಕಂಡು ಕೊಲೆ ರಹಸ್ಯ ಬಯಲಿಗೆ ಎಳೆದಿದ್ದಾರೆ.
ಮೃತದೇಹ ಕೊಳೆತಿದ್ದು, ಪ್ಲಾಸ್ಟಿಕ್‌ ನಲ್ಲಿ ಸುತ್ತಿ ಹಾಕಲಾಗಿತ್ತು. ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ(55) ಎಂದು ಪೊಲೀಸರು ಗುರುತಿಸಿದ್ದಾರೆ,
ಸಂಪೂರ್ಣ ತನಿಖೆ ಮತ್ತು ವಿಚಾರಣೆಯ ನಂತರ, ಪೊಲೀಸರು ಆರೋಪಿಗಳನ್ನು ಅವರ ಪತ್ನಿ ಶ್ಯಾಮಲಿ(48) ಮತ್ತು ಮಗ ಜಾಯ್(25) ಎಂದು ಗುರುತಿಸಿದ್ದಾರೆ. ಪೊಲೀಸರಿಂದ ವಿಚಾರಣೆ ನಂತರ ತಾಯಿ-ಮಗ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!