ಕಾಂತಾರ ಸಕ್ಸಸ್ ಬೆನ್ನಲ್ಲೇ ಈ ನಟನಿಗೆ ಬಂತು ಪ್ರಭಾಸ್ ‘ಸಲಾರ್’ ಸಿನಿಮಾದಿಂದ ಬಿಗ್ ಆಫರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಬಿಡುಗಡೆಗೊಂಡು 50 ದಿನ ಕಳೆದರೂ , ಚಿತ್ರದ ಕ್ರೆಜ್ ಇನ್ನೂ ಕಡಿಮೆಯಾಗಿಲ್ಲ. ದೇಶ ವಿದೇಶಗಳಲ್ಲಿ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ ಗಣ್ಯರು ಸಹ ಚಿತ್ರಕ್ಕೆ ಫಿದಾ ಆಗಿದ್ದರು. ಸಾಮಾನ್ಯ ನಟರನ್ನು ಬಳಸಿಕೊಂಡು ಮೂಡಿ ಬಂದ ಸಿನಿಮಾ ಕಾಂತರವಾಗಿತ್ತು.

ಇದೀಗ ಈ ಸಿನಿಮಾದಲ್ಲಿ ನಟಿಸಿದ್ದ ನಟರೊಬ್ಬರಿಗೆ ಬಂಪರ್ ಆಫರ್ ಸಿಕ್ಕಿದೆ. ನಟ ನವೀನ್ ಬೊಂಡೇಲ್ ಅವರು ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕಾಂತಾರ ಸಿನಿಮಾದಲ್ಲಿದೈವನರ್ತಕರ ಪಾತ್ರದಲ್ಲಿ ನಟಿಸಿದ್ದ ನವೀನ್ ಬೊಂಡೇಲ್ , ಪುಟ್ಟ ಪಾತ್ರವಾಗಿದ್ದರೂ ಎಲ್ಲರ ಮನಸ್ಸಿಗೆ ಮುಟ್ಟುವಂತೆ ನಟಿಸಿದ್ದರು. ಈ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ನವೀವ್ ಗೆ ಅವಕಾಶಗಳು ಹುಡುಕಿ ಬರುತ್ತಿದ್ದು, ಸದ್ಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲೇ ಬರ್ತಿರುವ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಪ್ರಶಾಂತ್ ಸಾರಥ್ಯದಲ್ಲಿ ಬರ್ತಿರುವ ಸಿನಿಮಾ ಈಗಾಗಲೇ 50ರಷ್ಟು ಚಿತ್ರೀಕರಣ ಮುಗಿಸಿರುವ ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ.

ನವೀನ್ ಬೊಂಡೇಲ್ ದೊಡ್ಡದಾದ ಆಕರ್ಷಕ ಕಣ್ಣುಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿದ್ದು, ನಟನೆಗೂ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ಜೊತೆಗೆ ರಂಗಭೂಮಿ ಕಲಾವಿದ.
ನವೀನ್ ಸಲಾರ್ ಜೊತೆಗೆ ಮತ್ತೊಂದು ನಿರೀಕ್ಷೆಯ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಶ್ರೀಮುರಳಿ ನಟನೆಯ ಬಘೀರಾ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!