ಟ್ವಿಟರ್ ಆಯ್ತು, ಇದೀಗ ಉದ್ಯೋಗಿಗಳ ಕೆಲಸ ಬಿಡಿಸಲು ಸಿದ್ಧವಾಯ್ತಾ ಫೇಸ್‌ಬುಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ವೇದಿಕೆಗಳನ್ನು ನಿರ್ವಹಿಸುವ ಮೆಟಾ ಇದೀಗ ದೊಡ್ಡಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಆದರೆ ವರದಿಯನ್ನು ಮೆಟಾ ದೃಢೀಕರಿಸಿಲ್ಲ.

ಇದಕ್ಕಾಗಿ ಉದ್ಯೋಗಿಗಳ ಪಟ್ಟಿ ತಯಾರಾಗಿದೆ. ಇನ್ನೇನು ಎರಡು ದಿನಗಳಲ್ಲಿ ವಜಾ ಪ್ರಕ್ರಿಯೆ ಆರಂಭವಾಗಲಿದೆ. ಇತ್ತೀಚೆಗಷ್ಟೇ ಟ್ವಿಟರ್ ಕೂಡ ದೊಡ್ಡಮಟ್ಟದಲ್ಲಿ ಉದ್ಯೋಗಿಗಳ ವಜಾಕ್ಕೆ ಮುಂದಾಗಿತ್ತು. ಮೆಟಾ ಕಂಪನಿಯ ಷೇರುಗಳ ಮೌಲ್ಯ ಸತತ ಇಳಿಕೆ ಕಂಡಿತ್ತು. ಒಟ್ಟಾರೆ 76 ಶತಕೋಟಿ ಡಾಲರ್‌ನಷ್ಟು ಮೌಲ್ಯ ಕಳೆದುಕೊಂಡಿದ್ದು, ಮೆಟಾ ಈ ವರ್ಷ ಬಹಳ ನಷ್ಟದಲ್ಲಿದೆ.

ಜಾಗತಿಕ ಆರ್ಥಿಕ ಪ್ರಗತಿ ಕುಂಠಿತಗೊಂಡಿರುವುದು ಮೆಟಾ ಮೇಲೆ ನೇರ ಪರಿಣಾಮ ಬೀರಿದೆ. ಮೈಕ್ರೊಸಾಫ್ಟ್, ಸ್ಮ್ಯಾಪ್, ಟ್ವಿಟರ್ ಸೇರಿದಂತೆ ಹಲವು ದೈತ್ಯ ಕಂಪನಿಗಳು ಉದ್ಯೋಗಿಗಳ ವಜಾಕ್ಕೆ ಮುಂದಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!