Friday, February 3, 2023

Latest Posts

ದಲೈಲಾಮಾ ಮೇಲೆ ಗೂಢಚಾರಿಕೆ ಮಾಡಲು ಬಂದಿರೋ ಚೀನಿ ಮಹಿಳೆ ಪತ್ತೆಗೆ ನಡೆದಿದೆ ಶೋಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌‌
ಬಿಹಾರದ ಗಯಾವು ಬೌದ್ಧ ಧರ್ಮಗುರು ದಲೈಲಾಮಾ ಅವರ ಭೇಟಿಗೆ ಸಜ್ಜಾಗಿದ್ದರೆ ಇನ್ನೊಂದೆಡೆ ಬಿಹಾರದಲ್ಲಿ ಭದ್ರತಾ ಏಜೆನ್ಸಿಗಳು ಹೈ ಅಲರ್ಟ್‌ ಆಗಿವೆ. ಬೌದ್ಧ ಗುರು ದಲೈಲಾಮಾ ಅವರ ಮೇಲೆ ಬೇಹುಗಾರಿಕೆ ಮಾಡಲು ಬಂದಿರುವ ಚೀನಿ ಮಹಿಳೆಯೊಬ್ಬಳ ಕುರಿತು ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಲಭಿಸಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಪೋಲೀಸರಿಗೆ ಸೂಚಿಸಲಾಗಿದೆ.

ದಲೈಲಾಮಾ ಮೇಲೆ ಬೇಹುಗಾರಿಕೆ ನಡೆಸಲು ಬಂದಿರುವ ಶಂಕಿತ ಚೀನಿ ಮಹಿಳೆಯ ರೇಖಾಚಿತ್ರವನ್ನು ಭದ್ರತಾ ಸಂಸ್ಥೆಗಳು ಬಿಡುಗಡೆಗೊಳಿಸಿದ್ದು ಆಕೆ ಗಯಾ ಪ್ರದೇಶದಲ್ಲಿಯೇ ನೆಲೆಸಿದ್ದಾಳೆ ಎನ್ನಲಾಗಿದೆ. ಕಳೆದ ವರ್ಷದಿಂದ ಗಯಾ ಮತ್ತು ರಾಜ್ಯದ ಇತರ ಭಾಗಗಳಲ್ಲಿ ತಂಗಿರುವ ಚೀನಾದ ಪ್ರಜೆಯ ಶಂಕಿತ ಚಟುವಟಿಕೆಗಳ ಬಗ್ಗೆ ಸ್ಥಳೀಯ ಪೊಲೀಸರು ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸಿದ್ದಾರೆ ಎಂದು ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಂಕಿತ ಚೀನೀ ಗೂಢಚಾರಿಕೆಯ ರೇಖಾಚಿತ್ರಗಳನ್ನು ಜಿಲ್ಲಾ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಮತ್ತು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಪೊಲೀಸ್ ಸಿಬ್ಬಂದಿ ಆಕೆಯ ಬಗ್ಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!