PARENTING HACK | ಮಕ್ಕಳ ಎದುರೇ ಜಗಳ ಆಡ್ತೀರಾ? ಇದರ ಪರಿಣಾಮ ಏನು? ಇಲ್ಲಿದೆ ಮಾಹಿತಿ..

ಬಂದವರ ಎದುರು ಜಗಳ ಆಡಬೇಡಿ ಎಂದರೆ ಒಕೆ, ಏಕಂದ್ರೆ ಅವರು ಎರಡು ದಿನ ಇರ‍್ತಾರೆ ಅಷ್ಟೆ, ನಮ್ಮ ರೂಂಗೆ ಬಂದು ಮಾತನಾಡಬಹುದು. ಆದರೆ ಸದಾ ಮನೆಯಲ್ಲೇ ಇರೋ ಮಕ್ಕಳ ಎದುರು ಜಗಳ ಆಡದೇ ಇರೋಕೆ ಸಾಧ್ಯವಾ? ನೀವು ನೀವಾಗಿ ಇರಲೇ ಬೇಕಲ್ವಾ? ಜಗಳ ನಿಮ್ಮ ರೂಮ್‌ನಲ್ಲಿ ಮಾತ್ರ ಆಡಿ ಎಂದು ಹೇಳುತ್ತಿಲ್ಲ, ಜಗಳ ಆಡೋದನ್ನೇ ನಿಲ್ಲಿಸಿ ಎನ್ನೋದು ನಮ್ಮ ಮಾತು.
ಇದರಿಂದ ನಿಮ್ಮ ಸಂಬಂಧ ಆರೋಗ್ಯಕರವಾಗಿರುತ್ತದೆ. ನೆನಪಿರಲಿ ನೀವು ನಿಮ್ಮ ಹೆಂಡತಿಯನ್ನು/ ಗಂಡನನ್ನು ಹೇಗೆ ನೋಡಿಕೊಳ್ತೀರ, ಮಾತನಾಡುತ್ತೀರ ಅವರು ಮುಂದೆ ಅವರ ಪತ್ನಿ/ಪತಿಯನ್ನು ಹಾಗೇ ನೋಡಿಕೊಳ್ತಾರೆ..

  • ಮಕ್ಕಳ ಎದುರು ಜಗಳ ಆಡಿದರೆ ಏನಾಗುತ್ತದೆ?
  • ನಿಮ್ಮ ಜಗಳ, ಗಲಾಟೆ, ಜೋರು ಧ್ವನಿಯಿಂದ ಮನೆ ಕೂಡ ಸೇಫ್ ಅಲ್ಲ ಎನ್ನುವ ಭಾವನೆ ಅವರಿಗೆ ಬರುತ್ತದೆ.
  • ಮಕ್ಕಳ ವಿಷಯಕ್ಕೆ ಜಗಳ ಆಡಿದರೆ, ನಮ್ಮಿಂದ ಅಪ್ಪ ಅಮ್ಮ ಜಗಳ ಆಡುತ್ತಾರೆ, ನಾನೇ ಇದಕ್ಕೆಲ್ಲಾ ಕಾರಣ ಎಂದು ಮಕ್ಕಳು ನೊಂದುಕೊಳ್ಳುತ್ತಾರೆ.
  • ಮಕ್ಕಳಿಗೆ ಜಗಳದಲ್ಲಿ ತಂದೆ ಅಥವಾ ತಾಯಿ ಒಬ್ಬರ ಪರ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
  • ಮಕ್ಕಳು ಅವರ ಭಾವನೆಯನ್ನು ನಿಮ್ಮ ಮುಂದೆ ಹೇಳದೇ ಇರಬಹುದು
  • ಈಗಲ್ಲ, ಭವಿಷ್ಯದಲ್ಲಿ ಇದರ ಪರಿಣಾಮ ನೀವೇ ಎದುರಿಸಬೇಕಾಗಬಹುದು, ನಿಮಗೆ ಎದುರು ಮಾತನಾಡುವುದು, ವಾದ ಮಾಡುವುದು ಹೆಚ್ಚಾಗುತ್ತದೆ.
  • ಸಿಟ್ಟು, ಕೋಪ, ದುಃಖ, ಖಿನ್ನತೆ ಹಾಗೂ ಒತ್ತಡಕ್ಕೆ ದಾರಿ ಮಾಡಿಕೊಡುತ್ತೀರಿ.
  • ಸಣ್ಣ ಪುಟ್ಟ ಜಗಳ ಮಕ್ಕಳ ಎದುರು ಮಾಡಿದರೆ ಅದನ್ನು ಮಕ್ಕಳೆದುರೇ ಸರಿಪಡಿಸಿಕೊಳ್ಳಿ. ಜಗಳ ಸಾಮಾನ್ಯ ಅದು ತಕ್ಷಣವೇ ಸರಿಯಾಗುತ್ತದೆ ಎನ್ನುವ ಭಾವನೆ ಅವರಲ್ಲಿ ಮೂಡಲಿ.
  • ಶಾಲೆಯಲ್ಲಿ ವೈಲೆಂಟ್ ಬಿಹೇವಿಯರ್ ತೋರುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!