ಕಾಮಗಾರಿ ಹಿನ್ನೆಲೆ: ಡಿಸೆಂಬರ್ 31ರವರೆಗೆ ಪಂಬನ್ ಸೇತುವೆಯಲ್ಲಿ ರೈಲು ಕಾರ್ಯಾಚರಣೆ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ರೈಲ್ವೆಯ ಮಧುರೈ ವಿಭಾಗವು ಪಂಬನ್ ಸೇತುವೆಯಲ್ಲಿ ಡಿಸೆಂಬರ್ 31 ರವರೆಗೆ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿದೆ. ಕಾಮಗಾರಿ ಪೂರ್ಣಗೊಂಡ ನಂತರ ರೈಲ್ವೇ ಇಂಜಿನಿಯರ್‌ಗಳು ಪರೀಕ್ಷೆ ನಡೆಸಲಿದ್ದು, ನಂತರವೇ ರೈಲುಗಳು ಸೇತುವೆ ದಾಟಲು ಅವಕಾಶ ನೀಡಲಾಗುವುದು ಎಂದು ರೈಲ್ವೆ ಪ್ರಾಧಿಕಾರ ಪ್ರಕಟಿಸಿದೆ.

ಮೂಲಗಳ ಪ್ರಕಾರ ಡಿಸೆಂಬರ್ 23 ರಂದು ದುರಸ್ತಿ ಕಾರ್ಯ ಪ್ರಾರಂಭವಾಗಿದೆ. ಪಂಬನ್ ರೈಲ್ವೆ ಸೇತುವೆಯು ರಾಮೇಶ್ವರಂ ದ್ವೀಪ-ಮಂಡಪಂ ಸಂಪರ್ಕಿಸುತ್ತದೆ. ದಕ್ಷಿಣ ರೈಲ್ವೆ ಮಧುರೈ ವಿಭಾಗವು ಪಂಬನ್ ಸೇತುವೆಯಲ್ಲಿ ರೈಲುಗಳ ಸಂಚಾರವನ್ನು ನಿಷೇಧಿಸಿ ರೆಡ್ ಅಲರ್ಟ್ ಘೋಷಿಸಿದೆ. ಇದರಿಂದಾಗಿ ಮಧುರೈ ಮತ್ತು ತಿರುಚ್ಚಿಯಿಂದ ಬರುವ ಪ್ಯಾಸೆಂಜರ್ ರೈಲುಗಳು ರಾಮನಾಥಪುರಂನಲ್ಲಿ ನಿಲ್ಲಿಸಿದ್ದು ಚೆನ್ನೈನಿಂದ ಬಂದ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಡಪಂನಲ್ಲಿ ನಿಲ್ಲಿಸಲಾಯಿತು.

ಮೂಲಗಳ ಪ್ರಕಾರ ರಾಮೇಶ್ವರಂನಿಂದ ರೈಲುಗಳ ಓಡಾಟಕ್ಕೆ ಬ್ರೇಕ್‌ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಾಮೇಶ್ವರದಿಂದ ಹೊರಡುವ ರೈಲುಗಳನ್ನು ಮಂಡಪದಿಂದ ಓಡಿಸಲಾಗುತ್ತಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!