Monday, October 3, 2022

Latest Posts

ಆಗ್ರಾ ಮೆಟ್ರೋ ಅನಾವರಣ: ಫೆಬ್ರವರಿಯಲ್ಲಿ ಮೊದಲ ರೈಲಿನ ಸ್ವಾಗತ ನಿರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸೋಮವಾರ ಡಿಜಿಟಲ್ ಮೂಲಕ ಆಗ್ರಾ ಮೆಟ್ರೋವನ್ನು ಅನಾವರಣಗೊಳಿಸಿದರು. ಗುಜರಾತ್‌ನಲ್ಲಿನ ಸೆಲ್ಲಿಯಲ್ಲಿರುವ ಉತ್ಪಾದನಾ ಘಟಕದಿಂದ 2023ರ ಫೆಬ್ರವರಿಯಲ್ಲಿ ಮೊದಲ ಆಗ್ರಾ ಮೆಟ್ರೋ ರೈಲುಗಳನ್ನು ತರಲು ಉತ್ತರ ಪ್ರದೇಶ ಸರ್ಕಾರ ಉದ್ದೇಶಿಸಿದೆ.

ತಾಜ್ ನಗರದಲ್ಲಿ ಮೆಟ್ರೋ ಯೋಜನೆಗಾಗಿ ಉತ್ತರಪ್ರದೇಶ ಮೆಟ್ರೋ ರೈಲು ಕಾರ್ಪೋರೇಷನ್(ಯುಪಿಎಮ್‌ಆರ್‌ಸಿ), ಅಲ್‌ಸ್ಟೋಮ್ ಇಂಡಿಯಾಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಂವಹನ ಆಧಾರಿತ ರೈಲು ನಿಯಂತ್ರಣ(ಸಿಬಿಟಿಸಿ) ವ್ಯವಸ್ಥೆಯನ್ನು ಅಲ್‌ಸ್ಟೋಮ್ ಕಂಪನಿಯು ತಯಾರಿಸಿ, ಆಗ್ರ ಮತ್ತು ಕಾನ್‌ಪುರ ಮೆಟ್ರೋ ಯೋಜನೆಗೆ ಹಸ್ತಾಂತರಿಸಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅಲ್‌ಸ್ಟೋಮ್ ಕಂಪನಿಯು ಹರಿಯಾಣ, ಹೈದರಾಬಾದ್, ಗುಜರಾತ್ ಮೆಟ್ರೋ ಯೋಜನೆಗೂ ಒಪ್ಪಂದ ಮಾಡಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!