32 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡುವ ಗುರಿ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಕಲಬುರಗಿ:

ರಾಜ್ಯದಲ್ಲಿ ಪ್ರಸ್ತುತ ವಷ೯ದ ಅವಧಿಯಲ್ಲಿ 32 ಲಕ್ಷ ಜನ ರೈತರಿಗೆ 24 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ನಮ್ಮ ಸಕಾ೯ರ ಹಾಕಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕ್ರಿಡಾಂಗಣದಲ್ಲಿ ಆಯೋಜಿಸಲಾಗಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾಯ೯ಕ್ರಮವನ್ನು ಉದ್ದೇಶಿತ ಮಾತನಾಡಿ,ಹಿಂದಿನ ಸಕಾ೯ರ ಕೇವಲ 18 ಲಕ್ಷ ಜನ ರೈತರಿಗೆ ಸಾಲ ನೀಡಿದ್ದು,ನಮ್ಮ ಸಕಾ೯ರ 32 ಲಕ್ಷ ಜನ ರೈತರಿಗೆ ಸಾಲ ನೀಡಿದ್ದು ನಮ್ಮ ಸಕಾ೯ರದ ಪ್ರಾಮಾಣಿಕ ಬದ್ಧತೆ ತೋರಿಸಿದ್ದೇವೆ ಎಂದರು.

ರೈತರ ಆದಾಯ,ಕೃಷಿ ಆದಾಯ ಹೆಚ್ಚಾಗುವ ಮೂಲಕ ರೈತನ ಬದುಕು ಹಸನಾಗಬೇಕು.ರೈತ ತಾನು ಬೆಳೆದ ಬೆಳೆಗೆ ತಾನೇ ದರವನ್ನು ನಿಗದಿ ಮಾಡುವ ಹಾಗೇ ಸ್ವಾವಲಂಬಿ ರೈತ ಆಗಬೇಕೆಂಬ ಕನಸು ನನ್ನದಾಗಿದೆ.ಎರಡು ವಷ೯ದ ಬಳಿಕ ರಾಜ್ಯ ಮಟ್ಟದ ಸಹಕಾರ ಸಪ್ತಾಹ ನಡೆಯುತ್ತಿದೆ.ಜಿಲ್ಲೆಯ ಹೊರತು ಪಡಿಸಿ ತಾಲೂಕು ಕೇಂದ್ರದಲ್ಲಿ ಸಹಕಾರ ಸಪ್ತಾಹ ಕಾಯ೯ಕ್ರಮ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ನಮ್ಮ ಬದುಕು ಸಹಕಾರದಿಂದ ಒಗ್ಗೂಡಿದೆ.ಮನುಷ್ಯ ಒಬ್ಬಂಟಿಯಾಗಿ ಬದುಕಲು ಸಾಧ್ಯವಿಲ್ಲ.ಸಹಕಾರ ನೀಡುವ ಸಮಾಜ ನಿಮಾ೯ಣವಾಗಬೇಕು.ನಮ್ಮ ಅಸ್ತಿತ್ವ ನಾವು ಭಾರತೀಯರು,ನಾವು ಕನ್ನಡಿಗರು ಎಂಬ ಧ್ಯೇಯದಿಂದ ಕೂಡಿರಬೇಕು. ಸಹಕಾರದಿಂದ ಏನೆಲ್ಲಾ ಕೂಡ ಸಾಧನೆ ಮಾಡಬಹುದಾಗಿದ್ದು,ಸಹಕಾರದಿಂದ, ಸಂಘಟನೆಯಿಂದ ವ್ಯಯಕ್ತೀಕ ಸಾಧನೆ ಮಾಡಬಹುದಾಗಿದೆ ಎಂದು ಹೇಳಿದರು.

ಹಿಂದಿನ ಸಕಾ೯ರದ ಅವಧಿಯಲ್ಲಿ ಮುಚ್ಚಿ ಹೋಗುವ ಪರಿಸ್ಥಿತಿಯಲ್ಲಿ ಇದ್ದಂತಹ ಕಲಬುರಗಿ-ಯಾದಗಿರಿ ಬ್ಯಾಂಕ್, ನ್ನು ಎರಡು ವಷ೯ದೊಳಗೆ ಮೇಲೆ ಎತ್ತಿ,ಎರಡುವರೇ ಲಕ್ಷ ರೈತರಿಗೆ ಸಹಾಯ ಮಾಡಿದ ಕೀತಿ೯ ಬ್ಯಾಂಕ್, ಗೆ ಸಲ್ಲುತ್ತದೆ. ಹಿಂದಿನ ಅವಧಿಯಲ್ಲಿ ಅವನತಿಗೆ ಹೋಗಿದ್ದ ಬ್ಯಾಂಕ್, ನಮ್ಮ ಸಕಾ೯ರದ ನೆರವಿನಿಂದ ಸಹಕಾರಿ ಬ್ಯಾಂಕ್ ಮೂಲಕ ಎರಡುವರೇ ಲಕ್ಷ ಜನರಿಗೆ 1012 ಕೋಟಿ ಸಾಲ ನೀಡಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!