ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ರೈ ಮಗಳು ಆರಾಧ್ಯ ರೈ ಬಚ್ಚನ್: ಕಾರಣವೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವಿನ ಸಂಬಂಧ ಕುರಿತು ಹಲವು ಬಾರಿ ಸುದ್ದಿಗಳು ಹರಿದಾಡಿದ್ದು, ಇಬ್ಬರ ನಡುವೆ ವೈಮನಸ್ಸು, ಸಂಬಂಧದಲ್ಲಿ ಬಿರುಕು ಸೇರಿದಂತೆ ಹಲವು ಸುದ್ದಿಗಳಿಗೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದರು.

ಇದೀಗ ಬಚ್ಚನ್ ಕುಟುಂಬದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ರೈ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆರಾಧ್ಯ ಅರ್ಜಿ ಪುರಸ್ಕರಿಸಿದ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಪೋಷಕರ ಜೊತೆ ಮುಂಬೈನಲ್ಲಿ ನೆಲೆಸಿರುವ ಆರಾಧ್ಯ ರೈ ಬಚ್ಚನ್ ವಯಸ್ಸು 14. ಇದೀಗ ಆರಾಧ್ಯ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಇದಕ್ಕೆ ಮುಖ್ಯ ಕಾರಣ ತನ್ನ ವಿರುದ್ಧ ಗೂಗಲ್ ಸೇರಿದಂತೆ ಕೆಲ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದನ್ನು ನಿರ್ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಆರಾಧ್ಯ ರೈ ಬಚ್ಚನ್ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

ಜಸ್ಟೀಸ್ ಮಿನಿ ಪುಷ್ಕರನ್ ಈ ಅರ್ಜಿ ವಿಚಾರಣೆ ನಡೆಸಿದ್ದಾರೆ. ಬಳಿಕ ಈ ಕುರಿತು ಉತ್ತರ ನೀಡುವಂತೆ ಗೂಗಲ್ ಸೇರಿದಂತೆ ಹಲವು ವೆಬ್‌ಸೈಟ್‌ಗಳಿಗೆ ನೋಟಿಸ್ ನೀಡಿದೆ.

ಇದೇ ವೇಳೆ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.

ಈ ಹಿಂದೆ ಅಂದರೆ 2023ರಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಈ ಕುರಿತು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಪುತ್ರಿಯ ಖಾಸಗಿ ತನ ಹಾಗೂ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಹೈಕೋರ್ಟ್ ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ವಿಡಿಯೋ ಡಿಲೀಟ್ ಮಾಡುವಂತೆ ಖಡಕ್ ಸೂಚನೆ ನೀಡಿತ್ತು.

ಅರಾಧ್ಯ ಅರ್ಜಿಯಲ್ಲಿ ಏನಿದೆ?
ದೆಹಲಿ ಹೈಕೋರ್ಟ್‌ಗೆ ಅರಾಧ್ಯ ರೈ ಬಚ್ಚನ್ ಸಲ್ಲಿಸಿದ ಅರ್ಜಿಯಲ್ಲಿ ಕೆಲ ಪ್ರಮುಖ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಈ ಪೈಕಿ ಆರಾಧ್ಯ ರೈ ಬಚ್ಚನ್ ಕುರಿತು ತಪ್ಪು ಮಾಹಿತಿ ಹರಡಲಾಗುತ್ತಿದೆ. ಪ್ರಮುಖವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ. ಆರಾಧ್ಯ ರೈ ಬಚ್ಚನ್ ಖಾಸಗಿತನ, ಇತರ ಎಲ್ಲಾ ಮಕ್ಕಳಿಗೆ ಇರುವಂತ ಮೂಲಭೂತ ಹಕ್ಕುಗಳು ಅನ್ವಯವಾಗುತ್ತದೆ. ಆದರೆ ಸೆಲೆಬ್ರೆಟಿ ಪುತ್ರಿ ಅನ್ನೋ ಕಾರಣಕ್ಕೆ ಮೂಲಭೂತ ಹಕ್ಕಿನ್ನು ಹಾಗೂ ಖಾಸಗಿತನಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೋರ್ಟ್ ಪ್ರಮುಖವಾಗಿ ಸೆಲೆಬ್ರೆಟಿ ಮಕ್ಕಳೇ ಆಗಿರಬಹುದು, ಜನಸಾಮಾನ್ಯರ ಮಕ್ಕಳೇ ಆಗಿರಬಹುದು. ಅವರ ವೈಯುಕ್ತಿಕ, ಖಾಸಗಿತನ, ಮೂಲಭೂತ ಹಕ್ಕುಗಳ ಧಕ್ಕೆ ಅಪರಾಧವಾಗಿದೆ. ಅದರಲ್ಲೂ ಯಾವುದೇ ಮಕ್ಕಳ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಕುರಿತು ವರದಿ ಮಾಡುವಂತಿಲ್ಲ. ಈ ಕುರಿತು ತಪ್ಪು ಮಾಹಿತಿಯನ್ನು ನೀಡುವುದು ಅತೀ ದೊಡ್ಡ ಅಪರಾಧವಾಗಿದೆ ಎಂದು ಕೋರ್ಟ್ ಹೇಳಿದೆ. ಸದ್ಯ ಈ ಕುರಿತು ನೋಟಿಸ್ ಜಾರಿ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿದ ಆರೋಪ ಹೊತ್ತಿರುವವರು ಅವರ ವಾದ ಆಲಿಸಲು ಕೋರ್ಟ್ ಸಮಯ ನೀಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!