ಅಸಹಕಾರ ಚಳುವಳಿ ವೇಳೆ ಮಹಿಳಾ ಸತ್ಯಾಗ್ರಹ ಸಂಘಟಿಸಿದ್ದರು ಭಾರತಿ ದೇವಿ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತಿ ದೇವಿ ಗೋಗಿನೇನಿ ಅವರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲಾ ತಾಲೂಕಿನ ಮಾಚವರಂನಲ್ಲಿ ಜನಿಸಿದರು.
ಈಕೆ ನಿಡುಬ್ರೋಲು ನಿವಾಸಿಯಾಗಿದ್ದ ಆಕೆ ತನ್ನ ಆರಂಭಿಕ ಶಿಕ್ಷಣವನ್ನು ಗುಂಟೂರಿನ ಸರದಾ ನಿಕೇತನದಲ್ಲಿ ಪಡೆದರು. ಆ ಬಳಿಕ ಉನ್ನತ ವಿದ್ಯಾಭ್ಯಾಸಕ್ಕೆ ಇಂಗ್ಲೆಂಡಿಗೆ ಹೋಗಿ 1925-26ರಲ್ಲಿ ಆಕ್ಸ್‌ಫರ್ಡ್‌ನ ರಸ್ಕಿನ್ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಅಧ್ಯಯನ ಮಾಡಿದರು. 1931ರಲ್ಲಿ ಭಾರತಕ್ಕೆ ಹಿಂತಿರುಗಿದ ಆಕೆ ಸ್ವಾತಂತ್ರ್ಯ ಹೋರಾಟಗಳಲ್ಲಿ ತೊಡಗಿಕೊಂಡರು.
ಗುಂಟೂರು, ಪಶ್ಚಿಮ ಗೋದಾವರಿ ಮತ್ತು ಕೃಷ್ಣಾ ಜಿಲ್ಲೆಯಲ್ಲಿ ‘ಮಹಿಳಾ ಸತ್ಯಾಗ್ರಹ’ವನ್ನು ಸಂಘಟಿಸಿದರು. 1932 ರಲ್ಲಿ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಆಕೆಯನ್ನು ಬಂಧಿಸಿ ಚಳವಳಿಯಲ್ಲಿ ಭಾಗಿಯಾಗಿದ್ದಕ್ಕೆ 500 ರೂ. ದಂಡ ವಿಧಿಸಿ ಒಂದು ವರ್ಷ ಜೈಲಿನಲ್ಲಿ ಇಡಲಾಗಿತ್ತು. ಸ್ವಾತಂತ್ರ್ಯಕ್ಕಾಗಿ ಕಠಿಣ ಜೈಲುಶಿಕ್ಷೆಯನ್ನು ಅನುಭವಿಸಿ ಹೊರಬಂದ ಭಾರತೀ ದೇವಿ ಆ ಬಳಿಕ ಮತ್ತಷ್ಟು ಹೋರಾಟಗಳಲ್ಲಿ ತೊಡಗಿಕೊಂಡರು. ಹರಿಜನರ ಅಂತರ್-ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕಾ ಕಾರ್ಯಕ್ರಮಗಳನ್ನು  ಆಯೋಜಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ 1958 ರಲ್ಲಿ ಆಂಧ್ರ ಪ್ರದೇಶ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದರು. ಭಾರತಿ ದೇವಿಯವರು 27 ಸೆಪ್ಟೆಂಬರ್ 1972 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!