ಉಕ್ರೇನ್ ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ: ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ ಜೊತೆ ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್ ರಾಜಧಾನಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ ನೀಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 24 ದಿನಗಳ ನಂತರ ಅವರು ಭೇಟಿ ನೀಡಿದ್ದಾರೆ.

ಭೇಟಿ ವೇಳೆ ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಕ್ ಉಕ್ರೇನ್ ಗೆ ದೃಢವಾದ ಬೆಂಬಲವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು ಎನ್ನಲಾಗಿದೆ.

ತಮ್ಮ ಭೇಟಿಯ ಸಂದರ್ಭದಲ್ಲಿ ಸುನಕ್ ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರಿಗೆ ಯುನೈಟೆಡ್ ಕಿಂಗ್ ಡಮ್ 50 ಮಿಲಿಯನ್ ಎಸ್ ಟಿಜಿ ಮೌಲ್ಯದ ವಾಯು ರಕ್ಷಣಾ ಪ್ಯಾಕೇಜ್ ಅನ್ನು ಒದಗಿಸಲಿದೆ ಎಂದು ತಿಳಿಸಿದರು.

ಇದರಲ್ಲಿ 125 ವಿಮಾನ ನಿರೋಧಕ ಬಂದೂಕುಗಳು ಮತ್ತು ರಷ್ಯಾದ ಇರಾನ್ ಪೂರೈಕೆ ಡ್ರೋನ್ಗಳನ್ನು ಎದುರಿಸುವ ತಂತ್ರಜ್ಞಾನವೂ ಸೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!